ಪಾಪದ ಹಣವನ್ನು ಖಂಡಿತ ಮುಟ್ಟಬೇಡಿ :ಎಚ್.ಡಿ.ಕುಮಾರಸ್ವಾಮಿ

ಶಿರಾ

    ಹೇಗಾದರೂ ಸರಿ ಚುನಾವಣೆ ಗೆಲ್ಲಲೇಬೇಕೆಂಬ ಹಠದಿಂದ ಬಿಜೆಪಿ ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಪಾಪದ ಹಣವನ್ನು ಹಂಚುತ್ತಿದ್ದು, ಮತದಾರರು ಇಂತಹ ಪಾಪದ ಹಣವನ್ನು ಮುಟ್ಟಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ತಾವರೇಕೆರೆ ಗ್ರಾಮದಲ್ಲಿ ಬುಧವಾರ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಶಿರಾ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಕಾರ್ಯಕರ್ತರಲ್ಲಿ ಪ್ರಾಮಾಣಿಕತೆಯ ರಕ್ತವಿದೆ. ಇಲ್ಲಿ ಪಕ್ಷಕ್ಕಾಗಿ ದುಡಿಯುವ ಕಟ್ಟಾಳುಗಳಂತಹ ಕಾರ್ಯಕರ್ತರಿದ್ದಾರೆ. ಜೆಡಿಎಸ್ ಪಕ್ಷವನ್ನು ಮಣಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಂದಲೂ ಸಾಧ್ಯವಿಲ್ಲ ಎಂದರು.

    ಪಕ್ಷದಿಂದ ಹೊರ ಹೋಗುವವರು ಪಕ್ಷದಲ್ಲಿ ನಿಷ್ಟೆಯಿಂದ ದುಡಿದವರಲ್ಲ. ಪಕ್ಷದಲ್ಲಿ ಅಧಿಕಾರಗಳನ್ನು ಸವಿದು ಹೋದವರಿಗೆ ಆ ಪಕ್ಷಗಳಲ್ಲೂ ಗೌರವ ಸಿಗುವುದಿಲ್ಲ. ಜೆ.ಡಿ.ಎಸ್. ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ನಿಜಕ್ಕೂ ಮೋಸವಾಗುವುದಿಲ್ಲ ಎಂದು ಎಚ್.ಡಿ. ಕುಮಾರ ಸ್ವಾಮಿ ತಿಳಿಸಿದರು.

    ಶಾಸಕ ಸತ್ಯನಾರಾಯಣ್ ಅಕಾಲಿಕ ಮರಣವನ್ನು ನಾವು ನಿರೀಕ್ಷಿಸಿರಲಿಲ್ಲ. ಪಕ್ಷದಿಂದ ಕಣದಲ್ಲಿರುವ ಅಭ್ಯರ್ಥಿ ಅಮ್ಮಾಜಮ್ಮ ಅವರು ಸತ್ಯಣ್ಣ ಅವರ ಧರ್ಮಪತ್ನಿಯೂ ಆಗಿದ್ದು, ಅವರ ಗೆಲುವು ಖಚಿತ. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಉಳಿದ ಎರಡೂವರೆ ವರ್ಷದ ಅವಧಿಗೆ ಶಾಸಕಿಯನ್ನಾಗಿ ಮಾಡುವ ಹಂಬಲ ಕ್ಷೇತ್ರದ ಜನತೆಗೂ ಇದೆ ಎಂದರು.

    ರಾಜ್ಯ ಜೆಡಿಎಸ್ ಪಕ್ಷದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮಸತ್ಯನಾರಾಯಣ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆಂಜಿನಪ್ಪ, ತಾ. ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಟಿ.ಡಿ.ಮಲ್ಲೇಶ್, ಹೊನ್ನೇನಹಳ್ಳಿ ನಾಗರಾಜು, ಸಿ.ಆರ್.ಉಮೇಶ್, ಆರ್.ರಾಮು, ಬಿ.ಸತ್ಯಪ್ರಕಾಶ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link