ಪ್ಯಾರಿಸ್ :
ದುಷ್ಕರ್ಮಿಗಳು ಚರ್ಚ್ನೊಳಗೆ ನುಗ್ಗಿ ದಾಳಿ ನಡೆಸಿ, ಮೂವರನ್ನು ಹತ್ಯೆ ಮಾಡಿ, ಒಬ್ಬ ಮಹಿಳೆಯ ತಲೆಯನ್ನು ಕತ್ತರಿಸಿರುವ ಘಟನೆ ಫ್ರಾನ್ಸ್ ಚರ್ಚ್ ನಲ್ಲಿ ನಡೆದಿದೆ.
ನಗರದ ನೊಟ್ರೆ ಡೇಮ್ ಚರ್ಚ್ ನಲ್ಲಿ ಚೂರಿಯಿಂದ ವ್ಯಕ್ತಿಯೊಬ್ಬ ದಾಳಿ ನಡೆಸಿ ಮಹಿಳೆ ಸೇರಿದಂತೆ ಮೂವರನ್ನು ಹತ್ಯೆಗೈದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಮೇಯರ್ ಕ್ರಿಸ್ಟಿಯಾನ್ ಎಸ್ಟ್ರೋಸಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ದುಷ್ಕರ್ಮಿಗಳ ಆಕಸ್ಮಿಕ ದಾಳಿಯಲ್ಲಿ ಚಾಕುವಿನಿಂದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ, ಶಿರಚ್ಛೇದನ ನಡೆಸಿದ್ದಾನೆ. ಅಲ್ಲದೇ ದಾಳಿ ತಡೆಯಲು ಬಂದಂತ ಇತರ ಇಬ್ಬರ ಮೇಲೂ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮೇಯರ್ ಕ್ರಿಸ್ಟಿಯನ್ ಎಸ್ಟ್ರೋಸಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ