ಕುಣಿಗಲ್ :
ಇಂಧನ ಉಳಿತಾಯ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಇಂಡಿಯನ್ ಅಯಿಲ್ ಕಂಪನಿಯಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪ್ಯೂಯಲ್ ಅಟ್ ಕಾಲ್ ಸಂಚಾರಿ ಘಟಕಕ್ಕೆ ಬುಧವಾರ ತಾಲೂಕಿನ ಎಡೆಯೂರು ಹೋಬಳಿ ಬ್ಯಾಲದಕೆರೆ ಗೇಟ್ ಸಮೀಪದ ಪುನೀತ್ ಪೆಟ್ರೋಲ್ ಬಂಕ್ನಲ್ಲಿ ಚಾಲನೆ ನೀಡಲಾಯಿತು.
ಇಂಡಿಯನ್ ಆಯಿಲ್ ಕಂಪನಿಯ ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಆನಂದ್ ಮೂರ್ತಿ ಸಂಚಾರಿ ಘಟಕಕ್ಕೆ ಚಾಲ ನೀಡಿ ಮಾತನಾಡಿ, ಅತೀ ಹೆಚ್ಚು ಪ್ರಮಾಣದ ಡೀಸೆಲ್ ಬಳಕೆ ಮಾಡುವ ಗ್ರಾಹಕರ ಹಿತದೃಷ್ಟಿಗಾಗಿ ಈ ಘಟಕಕ್ಕೆ ಚಾಲನೆ ನೀಡಲಾಗಿದೆ.
ಗ್ರಾಮಕರು ತಾವು ಇರುವ ಸ್ಥಳದಿಂದಲೇ ಕೆರೆ ಮಾಡಿದರೇ ಸಾಕು ಪೆಟ್ರೋಕ್ ಬಂಕ್ನ ದರದಲ್ಲೇ ಡೀಸೆಲ್ ಸರಬರಾಜು ಮಾಡಲಾಗುವುದು. ಇದರಿಂದ ಗ್ರಾಹಕರಿಗೆ ಇಂಧನದಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಯಬಹುದು ಎಂದು ತಿಳಿಸಿದರು.
ಶಾಲಾ ಕಾಲೇಜು, ಕ್ರಷರ್, ಬೋರ್ವೆಲ್ ಡೀಲರ್ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಬಳಕೆ ಮಾಡುವ ಗ್ರಾಹಕರು ಯಾವುದೇ ರಕ್ಷಣಾ ಕ್ರಮಗಳಿಲ್ಲದೇ ಬಂಕ್ಗಳಿಗೆ ಬಂದು ದೊಡ್ಡ ದೊಡ್ಡ ಕ್ಯಾನ್ಗಳಲ್ಲಿ ಇಂದನ ತುಂಬಿಸಿಕೊಂಡು ಬೇರೆ ಬೇರೆ ವಾಹನಗಳಲ್ಲಿ ಸಾಗಣಿಕ ಮಾಡುತ್ತಿದ್ದರೂ ಇದು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಸಾಗಾಣಿಕ ಮಾಡಲಾಗುತ್ತಿತ್ತು. ಈ ವೇಳೆ ಅನೇಕ ಅವಘಡಗಳು ಸಂಭವಿಸಿ ಅಪಾಯಗಳು ಉಂಟಾಗಿವೆ. ಇದನ್ನು ತಡೆಗಟ್ಟುವ ಜೊತಗೆ ಗ್ರಾಹಕರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಹೊಸ ಸಂಚಾರಿ ಘಟಕವನ್ನು ಚಾಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ 4-5 ಕಡೆ ಸಂಚಾರಿ ಘಟಕಗಳಿಗೆ ಚಾಲನೆ ನೀಡುವ ಕಾರ್ಯ ಪ್ರಗತಿಯಲ್ಲಿ ಇದೆ. ಒಂದು ಬಾರಿಗೆ ಆರು ಸಾವಿರ ಲೀಟರ್ ಡೀಸೆಲ್ನ್ನು ಸಂಚಾರಿ ಘಟಕದಲ್ಲಿ ಸಾಗಿಸಬಹುದಾಗಿದೆ ಎಮದು ತಿಳಿಸಿದರು.
ತುಮಕೂರು ಜಿಲ್ಲಾ ಮಾರಾಟ ವ್ಯವಸ್ಥಾಪಕ ರಾಜಾ ಖಜಾರೀಯಾ, ಪುನಿತ್ ಪೆಟ್ರೋಲ್ ಬಂಕ್ ಮಾಲೀಕ ಜಿಸಿಬಿ ರಾಜಣ್ಣ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ