ತುರುವೇಕೆರೆ :
ಪಟ್ಟಣದ ತರಕಾರಿ ಮಾರ್ಕೆಟ್ ಆವರಣದಲ್ಲಿ ವಿಧ್ಯುತ್ ಕಂಬಕ್ಕೆ ಬಳ್ಳಿಯೊಂದು ಹಬ್ಬಿದ್ದು ಅಪಾಯದ ಸೂಚನೆ ನೀಡುತ್ತಿದ್ದು ಸಂಬಂದಿಸಿದವರು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಸುಲಭ ಶೌಚಾಲಯಕ್ಕೆ ಹೊಂದಿಕೊಂಡಂತಿರುವ ವಿಧ್ಯುತ್ ಕಂಬಕ್ಕೆ ಬಳ್ಳಿಯೊಂದು ಹಬ್ಬಿದ್ದು ಸಾರ್ವಜನಿಕರು ಜೀವ ಭಯದಿಂದ ಓಡಾಡಬೇಕಾಗಿದೆ. ಈ ಸ್ಥಳ ಕಿಷ್ಕಿಂದೆಯ ರಸ್ತೆಯಾಗಿದ್ದು ಇಲ್ಲಿ ತರಕಾರಿ, ಕುಂಕುಮ ಹಾಗೂ ಪೂಜಾ ಸಾಮಗ್ರಿಗಳ ಅಂಗಡಿಗಳು ಯಥೇಚ್ಚವಾಗಿದ್ದು ಕೊಳ್ಳುವವರು ಮಾರುವವರು ನೂರಾರು ಜನ ಪ್ರತಿದಿನ ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ.
ಇದಕ್ಕೆ ಹೊಂದಿಕೊಂಡಂತಿರುವ ಸುಸಜ್ಜಿತವಾದ ಸುಲಭ ಶೌಚಾಲಯವೊಂದೆ ಸದ್ಯಕ್ಕೆ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಪ್ರತಿದಿನ ನೂರಾರು ಜನರು ಇಲ್ಲಿಗೆ ಆಗಮಿಸುವುದುಂಟು. ಮಳೆ ಬಂದ ಸಂಧರ್ಬದಲ್ಲಿ ಕಂಬದಿಂದ ಮಳೆನೀರು ಹರಿದು ವಿಧ್ಯುತ್ ಪ್ರಸರಿಸುವ ಸಾದ್ಯತೆ ಹೆಚ್ಚಿದ್ದು ಅಪಾಯ ಸಂಬಂದಿಸಿದರೆ ಸಂಬಂದಿಸಿದವರೇ ನೇರ ಹೊಣೆಗಾರರಾಗುತ್ತಾರೆ.
ಅಂತಹ ಸಂದರ್ಭ ಬಂದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ. ಆದ್ದರಿಂದ ಸಂಬಂದಿಸಿದವರು ಕೂಡಲೇ ಎಚ್ಚೆತ್ತು ಅಪಘಾತಕ್ಕೂ ಮುನ್ನಾ ಕ್ರಮ ಕೈಗೊಂಡು ಬಳ್ಳಿಯನ್ನು ತೆರವುಗೊಳಿಸುವಂತೆ ಬೀದಿಬದಿ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ