ಬೆಂಗಳೂರು :
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಅವರ ನಿಶ್ಚಿತಾರ್ಥ ನಾಳೆ (ಗುರುವಾರ) ನಡೆಯಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಖಾಸಗಿ ಹೋಟೆಲ್‍ವೊಂದರಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಡಿಕೆಶಿ ಹಾಗೂ ಎಸ್.ಎಂ.ಕೃಷ್ಣ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಕಳೆದ ಜೂ.12ರಂದು ಐಶ್ವರ್ಯ ಮತ್ತು ಅಮರ್ತ್ಯ ಮದುವೆ ನಿಶ್ಚಯವಾಗಿತ್ತು. ಕರೊನಾ ಕಾರಣಕ್ಕೆ ಮದುವೆ ಕಾರ್ಯವನ್ನು ಮುಂದೂಡಲಾಗಿದ್ದು, 2021ರ ಫೆಬ್ರವರಿಯಲ್ಲಿ ನೆರವೇರುವ ಸಾಧ್ಯತೆ ಇದೆ.
ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ ಅಮರ್ತ್ಯ, ತಂದೆ ಸಿದ್ಧಾರ್ಥ ಹೆಗ್ಡೆ ನಿಧನದ ನಂತರ ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಇನ್ನು ಐಶ್ವರ್ಯಾ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ತಂದೆ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ