ಗುಬ್ಬಿ:

ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಎರಡೂವರೆ ಎಕರೆ ಪ್ರದೇಶದಲ್ಲಿ ಚೆಂಡುಹೂ ಬೆಳೆದು ಕೊಳ್ಳುವವರಿಲ್ಲದೆ ಕೈ ಸುಟ್ಟುಕೊಂಡಿದ್ದ ಪ್ರಗತಿಪರ ರೈತ ಗುಬ್ಬಿ ಹೊರವಲಯದ ರಾಮಚಂದ್ರು ಅದೇ ಎರಡೂವರೆ ಎಕರೆ ಪ್ರದೇಶದಲ್ಲಿ ಇದೀಗ ಹೈಬ್ರಿಡ್ ತೊಗರಿ ಬೆಳೆ ಬೆಳೆದಿದ್ದು ಉತ್ತಮ ಆದಾಯಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಈಗಾಗಲೇ ತೊಗರಿ ಬೆಳೆ ಹೂವಾಗಿದ್ದು ಕಾಳು ಕಟ್ಟುವ ಹಂತದಲ್ಲಿದೆ. ಉತ್ತಮ ಬೆಳೆ ಬರುತ್ತದೆ ಆದರೆ ರೈತರ ನಿರೀಕ್ಷೆಯಂತೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತರೆ ಮಾತ್ರ ರೈತ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ರೈತ ರಾಮಚಂದ್ರು ಕೂಲಿ ಆಳುಗಳ ಸಹಾಯದಿಂದ ಎರಡೂವರೆ ಎಕರೆಯಲ್ಲಿ ಬೆಳೆದಿರುವ ತೊಗರಿಬೆಳೆಗೆ ರೋಗ ಬಾರದಂತೆ ವೈಜ್ಞಾನಿಕವಾಗಿ ರಾಸಾಯನಿಕ ಸಿಂಪರಣೆ ಮಾಡಿದ್ದಾರೆ.
ಈಗಾಗಲೆ ಸಾಕಷ್ಟು ಖರ್ಚು ಮಾಡಿ ಉತ್ತಮ ಆದಾಯ ಬರುವ ನಿರೀಕ್ಷೆಯಲ್ಲಿ ಇಡೀ ತೊಗರಿ ಬೆಳೆಯನ್ನು ಮಾದರಿಯಾಗಿ ಬೆಳೆದಿದ್ದಾರೆ. ಸಾಕಷ್ಟು ರೈತರು ಇವರ ತೊಗರಿ ಬೆಳೆಯನ್ನು ನೋಡಿ ಇದೆ ಮಾದರಿಯಲ್ಲಿ ಬೆಳೆಯಲು ಮುಂದಾಗಿದ್ದಾರೆ.
ಚೆಂಡು ಹೊವಿನ ಬೆಳೆ ಕೊರೊನಾದಿಂದ ಕೈಕೊಟ್ಟರೂ ಧೃತಿಗೆಡದೆ ಛಲಬಿಡದ ತ್ರಿವಿಕ್ರಮನಂತೆ ಲಕ್ಷಾಂತರ ರೂ ಖರ್ಚು ಮಾಡಿ ಹೈಬ್ರಿಡ್ ತೊಗರಿ ಬೆಳೆ ಬೆಳೆದಿದ್ದು ಉತ್ತಮ ಬೆಲೆ ಬರುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೆ ನಾಲ್ಕರಿಂದ ಐದು ಅಡಿವರೆಗೆ ಬೆಳೆದಿರುವ ತೊಗರಿ ಗಿಡಗಳು ಮೈತುಂಬ ಹೂವ್ವಿನಿಂದ ಕೂಡಿದ್ದರೆ ಮತ್ತೆ ಕೆಲವು ಗಿಡಗಳು ಕಾಯಿ ಬಿಡಲು ಆರಂಭಿಸಿವೆ. ಇವರ ಮಾದರಿ ತೊಗರಿ ಬೆಳೆ ಬೆಳೆದಿದ್ದ ಇತರೆ ರೈತರಿಗೆ ಮಾದರಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








