ಕೊರಟಗೆರೆ :
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಅಮಾನುಷವಾಗೆ ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಇಂದು ಮುಂಜಾನೆ ನಡೆದಿದೆ.
ಹಜರತ್ ಭಾನು(32) ಕೊಲೆಯಾದ ದುರ್ದೈವಿ. ಅವರ ಪತಿ ಚಾಂದ್ ಪಾಷ ಹತ್ಯೆಗೈದವ.
ಚಾಂದ್ಪಾಷ ಹಾಗೂ ಹಜರತ್ ಭಾನು ಮಧ್ಯೆ ಸೈಟ್ ವಿಚಾರಕ್ಕೆ ಜಗಳ ನಡೆದಿತ್ತು. ಇದೇ ಕಾರಣದಿಂದ ಕೋಪೋದ್ರಿಕ್ತನಾಗಿದ್ದ ಪತಿ, ಹಜರತ್ ಭಾನು ಹಾಗೂ ಮಗ ಮೊಹಮ್ಮದ್ ಅಲಿ(12) ಮಲಗಿದ್ದ ವೇಳೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮ ಹಜರತ್ ಭಾನು ಸ್ಥಳದಲ್ಲೇ ಸಾವನ್ನಪ್ಪಿದರೆ, ಮಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಹಿಳೆಯ ಶವವನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆರೋಪಿ ಚಾಂದುಪಾಷನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ