ತುರುವೇಕೆರೆ :
ತಾಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ ದೊಂಬರನಹಳ್ಳಿ ಗ್ರಾಮದ ಕೊಟ್ಟಿಗೆಯಲ್ಲಿದ್ದ 4 ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ.
ದೊಂಬರನಹಳ್ಳಿ ಗ್ರಾಮದ ಕೆಂಪಯ್ಯ ಎಂಬುವರು ತಮ್ಮ ಮನೆಗೆ ಹೊಂದಿಕೊಂಡಂತಿರುವ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕೂಡಿದ್ದರು.
ಭಾನುವಾರ ರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆ 4 ಮೇಕೆಗಳ ಮೇಲೆ ದಾಳಿ ಮಾಡಿ 4 ಮೇಕೆಗಳು ಕೊಂದಿದೆ. ಸೋಮವಾರ ಬೆಳಿಗ್ಗೆ ಕೆಂಪಯ್ಯ ಕೊಟ್ಟಿಗೆಗೆ ಬಂದು ನೋಡಿದಾಗ ಮೇಕೆಗಳು ಸತ್ತು ಬಿದ್ದಿರುವುದನ್ನು ಗಮನಕ್ಕೆ ಬಂದಿತು. ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ಘಟನೆಯ ಸ್ಥಳಕ್ಕೆ ಅರಣ್ಯ ಇಲಾಖಾ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ