ತಿಪಟೂರು :
ಕಸಬಾ ಹೋಬಳಿ, ಸಿದ್ದಾಪುರ ಗ್ರಾಮದ ರವಿಕುಮಾರ್ ಬಿನ್ ಶೇಖರಪ್ಪರವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯವನ್ನು ಪತ್ತೆಹಚ್ಚಿ 5 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಬಕಾರಿ ನಿರೀಕ್ಷಕರಾದ ವಿಜಯ್ ಕುಮಾರ್.ಕೆ.ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2020-21ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದ್ದು ಈ ಹಿನ್ನಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಸರಬರಾಜು, ಶೇಖರಣೆ, ಮತ್ತು ಮದ್ಯ ಹಂಚುವಿಕೆ ಮಾಡುವ ಸಂಭವ ಹಾಗೂ ಪಾರ್ಟಿಗಳನ್ನು ಆಯೋಜಿಸಿ ಮದ್ಯ ಹಂಚಿಕೆ ಮಾಡುವ ಸಂಭವವಿರುತ್ತದೆ. ಆದ್ದರಿಂದ ಈ ತರಹದ ಚಟುವಟಿಕೆಗಳು ಕಂಡುಬಂದಲ್ಲಿ ಇಲಾಖೆ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೂಕ್ತ ಕ್ರಮ ಜರುಗಿಸಲಾಗುವುದು. ಮತ್ತು ಅಕ್ರಮ ಮದ್ಯ ಶೇಖರಣೆ, ಸಾಗಾಣಿಕೆ, ಪೂರೈಕೆ, ನಕಲಿ ಮದ್ಯದ ತಯಾರಿಕೆ, ಸಾಗಾಣಿಕೆ, ಸಂಗ್ರಹ, ಹಂಚಿಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಅಬಕಾರಿ ನಿರೀಕ್ಷಕರ ಕಛೇರಿ ತಿಪಟೂರು ವಲಯ ದೂರವಾಣಿ ಸಂಖ್ಯೆ:08134-254574, ನಿರೀಕ್ಷಕರಾದ ವಿಜಯ್ ಕುಮಾರ್.ಕೆ.ಟಿ ರವರ ಮೊಬೈಲ್ ಸಂಖ್ಯೆ: 9620379070ಗೆ ಕರೆಮಾಡಿ ತಿಳಿಸುವಂತೆ ಕೋರಿದ್ದಾರೆ.
ತಿಪಟೂರು ವಲಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಸಂಬಂಧ 150 ದಂಡಾರ್ಹ ಪ್ರಕರಣಗಳನ್ನು ದಾಖಲಿಸಿದ್ದು ಒಟ್ಟು 3 ಲಕ್ಷ ರೂಗಳನ್ನು ದಂಡ ವಿಧಿಸಿ ವಸೂಲಿ ಮಾಡಲಾಗಿರುತ್ತದೆ. ಹಾಗು ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯ ಸಂಬಂಧ ಒಟ್ಟು 14 ಘೋರ ಪ್ರಕರಣಗಳನ್ನು ದಾಖಲಿಸಿದ್ದು 110.880 ಲೀಟರ್ ಮದ್ಯ, 4.620 ಲೀ ಬಿಯರ್ ಹಾಗೂ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿರುತ್ತದೆ.
ಈ ಪ್ರಕರಣಗಳ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ವಿಜಯ್ಕುಮಾರ್ ಜಿ.ವಿ. ಅಬಕಾರಿ ನಿರೀಕ್ಷಕರಾದ ವಿಜಯಕುಮಾರ್.ಕೆ.ಟಿ, ಅಬಕಾರಿ ಉಪ ನಿರೀಕ್ಷಕರಾದನಾಗರಾಜು, ಜಿ.ಆರ್. ಅಬಕಾರಿ ರಕ್ಷಕರಾದ ಪ್ರಸನ್ನ.ಎಸ್. ಮುಸ್ತಾಕ್, ರೇವಣ್ಣ ಎಲ್.ಆರ್. ಶಿವಶಂಕರಯ್ಯ. ಯತೀಶ್, ವೀಣಾ ಬಿ.ವಿ. ಎಸ್.ಎಂ.ರಾಜೇಶ್ವರಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
