ಕುಣಿಗಲ್ :
ಕುತೂಹಲ ಕೆರಳಿಸಿರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಯುವ ಉತ್ಸಾಹಿಗಳು ಭಾರೀ ಪೈಪೆÇೀಟಿ ನೀಡುವ ಮೂಲಕ ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆ ರಂಗೇರುತ್ತಿದೆ.
ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಬಾಗೇನಹಳ್ಳಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿರುವ ಬಹುತೇಕರಲ್ಲಿ ಯುವಕರೇ ಹೆಚ್ಚಾಗಿದ್ದಾರೆ.
ಬಹಳ ಹಿಂದಿನಿಂದಲೂ ಬರಿ ಹಿರಿಯರೇ ಸ್ಪರ್ಧಿಸುತ್ತಿದ್ದರು. ಆದರೆ ಈ ಬಾರಿ ಯುವಕರ ಕೈ ಮೇಲಾಗಿದೆ. ಬಾಗೇನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಹೊನ್ನೇನಹಳ್ಳಿ ಗ್ರಾಮದ ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಯುವ ಅಭ್ಯರ್ಥಿ ಎಚ್.ಬಿ.ಸುರೇಶ್ ಮಾತನಾಡಿ, ಹೊನ್ನೇನಹಳ್ಳಿ ಗ್ರಾಮದ 18ನೇ ಬ್ಲಾಕ್ ಸಾಮಾನ್ಯ ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾನು ಮತ್ತು ಯುವಕರು ಹಳ್ಳಿಯ ತೊರೆದು ನಗರ ಪ್ರದೇಶದಲ್ಲಿ ವಾಸವಾಗಿದ್ದ ಕೋವಿಡ್ ಸಂದರ್ಭದಲ್ಲಿ ಗ್ರಾಮಗಳ ಕಡೆ ಮುಖ ಮಾಡಿ ತಮ್ಮ ತೋಟದ ಮನೆಗಳಲ್ಲಿ ಇದ್ದಾಗ ಅಂತಹ ಸಂದರ್ಭದಲ್ಲಿ ನನ್ನ ಕೈಲಾದಷ್ಟು ಸಹಾಯಸ್ತ ಮಾಡಿದ್ದೇನೆ. ಇದೇ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಯ ಹಂಬಲದಂತೆ ಗ್ರಾಮಗಳ ಅಭಿವೃದ್ಧಿ ಆಶಾದಾಯಕವಾಗಿದೆ. ಗ್ರಾಮದಲ್ಲಿ ಹಲವು ವರ್ಷದಿಂದ ನೆನಗುದಿಗೆ ಬಿದ್ದಿರುವ ರಸ್ತೆ ಕುಡಿಯುವ ನೀರು ಆಸ್ಪತ್ರೆಯ ದಾಖಲಾತಿಯೊಂದಿಗೆ ಚಿಕಿತ್ಸೆ ಕೊಡಿಸಲು ನೆರವಾಗಿದ್ದೇನೆ ಹಾಗೂ ಕಂದಾಯ ಇಲಾಖೆಯಿಂದ ಬಡವರಿಗೆ ನಿರ್ಗತಿಕರಿಗೆ ವೃದ್ಧಾಪ್ಯ ವೇತನ ಅಂಗವಿಕಲರ ವೇತನ ಸೇರಿದಂತೆ ಅನೇಕ ಕೆಲಸವನ್ನು ಕಳೆದ ಹತ್ತಾರು ವರ್ಷದಿಂದ ಶ್ರಮಿಸಿದ್ದೇನೆ ಎಂದರು.
ಗ್ರಾಮೀಣಾಭಿವೃದ್ಧಿಯ ಕಾರ್ಯ ಕೈಗೊಳ್ಳುವ ಉತ್ಸಾಹ ನಮ್ಮಂತಹ ಯುವಕರಿಗೆ ಈ ಬಾರಿ ಚುನಾವಣೆಯಲ್ಲಿ ಇಲ್ಲಿನ ಹಿರಿಯರೇ ಅವಕಾಶ ಮಾಡಿಕೊಟ್ಟಿದ್ದಾರೆ. ಹಳ್ಳಿಯ ಬದುಕನ್ನು ಶಕ್ತಿಮೀರಿ ಪ್ರಾಮಾಣಿಕವಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತ ಉತ್ತಮ ಕ್ಷೇತ್ರವನ್ನಾಗಿ ಹುಟ್ಟಿದ ಗ್ರಾಮದ ಸೇವೆ ಮಾಡುವ ಮೂಲಕ ಋಣ ತೀರಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿಕು