ತುಮಕೂರು:
ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾದ ನ.30 ರಿಂದ ಡಿ.10ರವರೆಗೆ ತುಮಕೂರು ಉಪವಿಭಾಗ ವ್ಯಾಪ್ತಿಯಲ್ಲಿ ನಿರಂತರ ದಾಳಿ ಮಾಡಿ 53 ಪ್ರಕರಣ ದಾಖಲಿಸಿ 39 ಆರೋಪಿಗಳನ್ನು ಸೆರೆಹಿಡಿದು ಒಟ್ಟು 140 ಲೀ ಅಕ್ರಮ ಮದ್ಯ, 7 ಲೀಟರ್ ಬಿಯರ್ 6 ಬೈಕ್‍ಗಳು ಹಾಗೂ 1 ರಿಕ್ಷಾ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬ್ಕಾರಿ ಉಪಾಧೀಕ್ಷಕ ಎಚ್.ಜಿ.ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಉಪವಿಭಾಗ ವ್ಯಾಪ್ತಿಯ ತುಮಕೂರು, ಕುಣಿಗಲ್, ಗುಬ್ಬಿ ತಾಲೂಕುಗಳಲ್ಲಿ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ಸಂಗ್ರಹಣೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಂಡ ಮದ್ಯ ಮತ್ತು ವಾಹನಗಳ ಒಟ್ಟು ಮೌಲ್ಯ 4,24,700 ರೂ. ಆಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ