ತಿಪಟೂರು :
ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಾದಗಿನಿಂದ ಇಂದಿನವರೆಗೆ ಅಬಕಾರಿ ಇಲಾಖೆ ತಾಲೂಕಿನ ವಿವಿಧಡೆ ದಾಳಿ ನಡೆಸಿ 5 ಗಂಭೀರ ಪ್ರಕರಣಗಳನ್ನು ದಾಖಲು ಮಾಡಿಕೊಂಡು 3 ದ್ವಿಚಕ್ರವಾಹನ ಹಾಗೂ 46 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿಸಿದೆ.
ತಾಲ್ಲೂಕಿನ ಸಿದ್ದಾಪುರ ಗ್ರಾಮದ ರವಿಕುಮಾರ್ ಬಿನ್ ಶೇಖರಪ್ಪ, ಬ್ಯಾಡರಹಳ್ಳಿ ಗ್ರಾಮದ ಕೃಷ್ಣಪ್ಪ ಬಿನ್ ವೆಂಕಟರಾಯಪ್ಪ, ಹುಣಸೇಘಟ್ಟ ಗ್ರಾಮದ ರವಿ ಬಿನ್ ಮರಿಯಪ್ಪ, ನಾರಸಿಕಟ್ಟೆ ಪಾಳ್ಯದ ಯೋಗೇಶ್ ಮೂರ್ತಿ ಬಿನ್ ನಂಜಪ್ಪ ಹಾಗೂ ಬಿದರೆಗುಡಿ ಗ್ರಾಮದ ಸುಧಾಕರ್ ಬಿನ್ ರಾಮಯ್ಯ ಇವರುಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಇದಲ್ಲದೆಯೇ ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆಗೆ ಅವಕಾಶ ನೀಡಿದ ಹೋಟೆಲ್ ಡಾಬಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ದಾಳಿಯಲ್ಲಿ ಅಬಕಾರಿ ಉಪಅಧೀಕ್ಷಕ ವಿಜಯಕುಮಾರ್ ಜಿ.ವಿ, ಅಬಕಾರಿ ನಿರೀಕ್ಷಕ ವಿಜಯಕುಮಾರ್.ಕೆ.ಟಿ, ಅಬಕಾರಿ ಉಪನಿರೀಕ್ಷಕ ನಾಗರಾಜು ಜಿ.ಆರ್, ಅಬಕಾರಿ ಸಿಬ್ಬಂದಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
