ತುಮಕೂರು :
ಡಿ.22 ಮಂಗಳವಾರದಂದು ಮೊದಲ ಹಂತದ ಐದು ತಾಲೂಕುಗಳ 168 ಗ್ರಾಮ ಪಂಚಾಯ್ತಿಗಳ 2594 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಂತಿಮ ಕಣದಲ್ಲಿ 7142 ಅಭ್ಯರ್ಥಿಗಳು ಉಳಿದಿದ್ದಾರೆ.
2786 ಸ್ಥಾನಗಳ ಪೈಕಿ 156 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಗುಬ್ಬಿಯಲ್ಲಿ ಎರಡು ಪಂಚಾಯ್ತಿಗಳವರು ಚುನಾವಣೆ ಬಹಿಷ್ಕರಿಸಿರುವ ಕಾರಣಕ್ಕೆ 36 ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. ಉಳಿದಂತೆ ತುಮಕೂರು ತಾಲೂಕಿನ 41 ಪಂಚಾಯ್ತಿಗಳ 746 ಸ್ಥಾನಗಳ ಪೈಕಿ 13 ಅವಿರೋಧ ಆಯ್ಕೆ ಹೊರತುಪಡಿಸಿ 733 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 2185 ಉಮೇದುವಾರಿಕೆ ಸಲ್ಲಿಕೆಯಾಗಿದೆ.
ಕುಣಿಗಲ್‍ನ 36 ಪಂಚಾಯಿತಿಗಳ 496 ಸ್ಥಾನಗಳ ಪೈಕಿ 37 ಅವಿರೋಧ ಆಯ್ಕೆ ಹೊರತುಪಡಿಸಿ 459 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1208 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಗುಬ್ಬಿ ತಾಲೂಕಿನ 34 ಪಂಚಾಯಿತಿಗಳ 626 ಸ್ಥಾನಗಳ ಪೈಕಿ 65 ಅವಿರೋಧ ಆಯ್ಕೆ ಹೊರತುಪಡಿಸಿ 525 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1388 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಕೊರಟಗೆರೆಯ 24 ಪಂಚಾಯಿತಿಗಳ ಪೈಕಿ 25 ಸ್ಥಾನಗಳಿಗೆ ಅವಿರೋಧ ಆಯ್ಕೆ ಹೊರತುಪಡಿಸಿ 367 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1112 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಕಡೆಯದಾಗಿ ಪಾವಗಡ ತಾಲೂಕಿನ 33ಪಂಚಾಯಿತಿಗಳ ಪೈಕಿ ಅವಿರೋಧ ಆಯ್ಕೆಯಾದ 16ಸ್ಥಾನಗಳನ್ನು ಹೊರತುಡಪಿಸಿ 510 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.
ಮೊದಲ ಹಂತದ ಚುನಾವಣೆ ಪ್ರಮುಖಾಂಶಗಳು :
ಗ್ರಾಪಂಗಳ ಸಂಖ್ಯೆ – 168
ಗ್ರಾಪಂ ಸ್ಥಾನಗಳು – 2786
ಅವಿರೋಧ ಆಯ್ಕೆ – 156
ಚುನಾಯಿಸಬೇಕಾದ ಸ್ಥಾನಗಳು – 2594
ಒಟ್ಟು ಉಮೇದುವಾರರು – 7142
ಪರಿಶಿಷ್ಟ ಜಾತಿ ಅಭ್ಯರ್ಥಿಗಳು – 1639
ಪರಿಶಿಷ್ಟ ಪಂ. ಅಭ್ಯರ್ಥಿಗಳು – 639
ಹಿಂದುಳಿದ ವರ್ಗ ಅ – 875
ಹಿಂದುಳಿದ ವರ್ಗ ಬ – 244
ಸಾಮಾನ್ಯ ವರ್ಗ – 3745
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
