ಬಳ್ಳಾರಿ :
ಪಾಪ ಪ್ರಾಯಶ್ಚಿತ್ತಕ್ಕಾಗಿ ಬಳ್ಳಾರಿ ಜಿಲ್ಲೆಯ ಮೈಲಾರಲಿಂಗೇಶ್ವರ ದೇಗುಲಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ನ್ನು ಕಾಣಿಕೆಯಾಗಿ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.
2017 ರಲ್ಲಿ ದೇಗುಲಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿದ್ದ ಡಿಕೆಶಿ ಭಕ್ತರ ಚಿತ್ತಕ್ಕೆ ಭಂಗ ತಂದಿದ್ದರು. ಆ ವೇಳೆ ಡಿಕೆಶಿ ಜೊತೆ ಪರಮೇಶ್ವರ್ ನಾಯ್ಕ್ ಕೂಡ ಬಂದಿದ್ದರು. ಇದರಿಂದ ದೇವರ ಶಾಪಕ್ಕೆ ಗುರಿಯಾಗಿದ್ದ ಕಾರಣ ಪರಮೇಶ್ವರ್ ನಾಯ್ಕ್ ಮಂತ್ರಿಗಿರಿ ಕಳೆದುಕೊಂಡರು, ಡಿಕೆಶಿ ಜೈಲು ಸೇರಿದ್ದರು.
ಮೈಲಾರ ಲಿಂಗೇಶ್ವರ ದೇವಸ್ಥಾನದ ಮೇಲಿಂದ ಹೋಗಬಾರದು ಎಂಬ ಪ್ರತೀತಿ ಆ ಭಾಗದಲ್ಲಿದೆ. ಹಾಗೆ ಹಾಯ್ದು ಹೋದವರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂಬ ಪ್ರತೀತಿಯೂ ಇದೆ. ಆದರೆ ಅವತ್ತು ಡಿ.ಕೆ. ಶಿವಕುಮಾರ್ ಅವರಿದ್ದ ಹೆಲಿಕ್ಯಾಪ್ಟರ್ ದೇವಸ್ಥಾನದ ಮೇಲ್ಭಾಗದಲ್ಲಿ ಹಾಯ್ದು ಹೋಗಿತ್ತು. ಇದರಿಂದ ದೇವರ ಶಾಪಕ್ಕೆ ಗುರಿಯಾಗಿದ್ದ ಕಾರಣ ಪರಮೇಶ್ವರ್ ನಾಯ್ಕ್ ಮಂತ್ರಿಗಿರಿ ಕಳೆದುಕೊಂಡರು, ಡಿಕೆಶಿ ಜೈಲು ಸೇರಿದ್ದರು ಎನ್ನಲಾಗಿತ್ತು.
ಹಾಗಾಗಿ ಇದು ಮೈಲಾರಲಿಂಗನ ಶಾಪ ಎಂದು ಧರ್ಮದರ್ಶಿ ಹೇಳಿದ ಹಿನ್ನಲೆಯಲ್ಲಿ. ಇಂದು ದೇವರ ದರ್ಶನ ಮಾಡಿದ ಡಿಕೆಶಿ 1 ಕೆಜಿ ತೂಕದ ಬೆಳ್ಳಿಯ ಹೆಲಿಕಾಪ್ಟರ್ ನೀಡಿ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮಾಹಿತಿ ಕೊರತೆಯಿಂದ ಈ ಕ್ಷೇತ್ರಕ್ಕೆ ಹೆಲಿಕಾಪ್ಟರ್ ನಲ್ಲಿ ಮೂರು ವರ್ಷಗಳ ಹಿಂದೆ ಬಂದು ಹೋಗಿದ್ದೆ. ಇದರಿಂದ ಕ್ಷೇತ್ರದ ಧಾರ್ಮಿಕ ಪರಂಪರೆಗೆ ಅಪಚಾರವಾಗಿದೆ ಎಂದು ಅರಿವಾಯಿತು. ನಮ್ಮ ಕಾರ್ಯಕರ್ತರು, ಮುಖಂಡರು ದೋಷ ಪರಿಹಾರಕ್ಕಾಗಿ ಈಗಾಗಲೇ ಪೂಜೆ ಸಲ್ಲಿಸಿದ್ದಾರೆ. ಅವರ ಅಭಿಲಾಷೆಯಂತೆ ದೇವರಲ್ಲಿ ಕ್ಷಮೆ ಕೇಳಿ ಬೆಳ್ಳಿ ಹೆಲಿಕಾಪ್ಟರ್ ಅರ್ಪಿಸಿದ್ದೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ