ತಿಪಟೂರು :
ನಗರದ ಮಂಜುನಾಥ ನಗರದಲ್ಲಿ ರಸ್ತೆ ರೀಪೆರಿಗಾಗಿ ಬಂದಿದ್ದ ಕಾರ್ಮಿಕರು ನಿರ್ಮಿಸಿದ್ದ ಡೇರೆಗಳ ಮೇಲೆ ಕಾರು ಹರಿದು ಇಬ್ಬರಿಗೆ ಗಾಯಗಳಾಗಿದ್ದು ಒಬ್ಬರನ್ನು ಬೆಂಗಳೂರಿನ ನಿಮಾನ್ಸ್‍ಗೆ ಸೇರಿಸಲಾಗಿದೆ.
ಬುಧವಾರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎಂದಿನಂತೆ ತಮ್ಮ ದಿನಿತ್ಯದ ಕೆಲಸಗಳನ್ನು ಮುಗಿಸಿ ರಾತ್ರಿ ಡೇರೆಗಳಲ್ಲಿ ಮಲಗಿದ್ದ ಸಂದರ್ಭದಲ್ಲಿ ಏಕಾಏಕಿ ಜವರಾಯನಂತೆ ಕೆ.ಎ 13 ಸಿ 1282 ಸ್ವೀಫ್ಟ್ ಡಿಸೈರ್ ಕಾರ್ ಡೇರೆಗಳ ಮೇಲೆರಗಿದೆ. ಈ ಸಂದರ್ಭದಲ್ಲಿ ಡೇರೆಯಲ್ಲಿ ಮಲಗಿದ್ದ ರಾಘು (28) ತೀರ್ವವಾಗಿ ಗಾಯಗೊಂಡು ಚಿಂತಾಜನಕಸ್ಥಿತಿಯಲ್ಲಿದ್ದು ಇವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ಗಾಯಾಳುವಾದ ಖಾಜ (35) ಇವರಿಗೂ ಗಾಯಗಳಾಗಿದ್ದು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಟ್ಟೆಪಾಡಿಗಾಗಿ ನಾವು ಊರಿನಿಂದ ಊರಿಗೆ ಬರುತ್ತೇವೆ, ನಮಗೆ ಮನೆಮಠ ಯಾವುದೂ ಇಲ್ಲ ದಿನನಿತ್ಯ ಕೂಲಿಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಅದರಲ್ಲಿಯೇ ಉಳಿಸಿ ಮನೆಯ ನಿರ್ವಹಣೆಯನ್ನು ಮಾಡುತ್ತೇವೆ. ಮೊನ್ನೆ ರಾತ್ರಿ ಇದ್ದಕಿದ್ದಂತೆ ನಮ್ಮ ಡೇರೆಗಳ ಮೇಲೆ ಕಾರು ನುಗ್ಗಿದಾಗ ರಾಘು ಮತ್ತು ಖಾಜಾನಿಗೆ ತೀರ್ವವಾದ ಗಾಯಗಳಾಗಿವೆ. ಎಂದು ಮಹಿಳೆಯರು ಹೇಳಿದರು.
ಕಾರು ಬಿಟ್ಟು ಪರಾರಿ: ರಸ್ತೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಡೇರೆಗೆಳ ಮೇಲೆ ಕೆ.ಎ 13 ಸಿ 1282 ಸ್ವೀಫ್ಟ್ ಡಿಸೈರ್ ಕಾರ್ ಹತ್ತಿದ ತಕ್ಷಣವೇ ಗಾಬರಿಯಾದ ಚಾಲಕ ಮತ್ತು ಸಹಚರರು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅಪಘಾತ ಉಂಟುಮಾಡಿದ ವಾಹನವನ್ನು ತಿಪಟೂರು ಗ್ರಾಮಾಂತರ ಠಾಣಾ ಪೋಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ