ಪಾವಗಡ :
ಪುರಸಭೆಯಿಂದ ಬಾಡಿಗೆಗೆ ಪಡೆದ ಅಂಗಡಿ ಮಳಿಗೆಗೆಳ ಬಾಡಿಗೆ ಪಾವತಿಸದವರ ಮೇಲೆ ಸೂಕ್ತ ಕ್ರಮಕೈಗೊಂಡು ಅಂಗಡಿಗಳನ್ನು ಮುಟ್ಟುಗೊಲು ಹಾಕಿಕೊಳ್ಳುವಂತೆ ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಪುರಸಭಾ ಕಾರ್ಯಲಯದಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಇದುವರೆಗೆ ಅಂಗಡಿಗಳ ಬಾಡಿಗೆ ಪಾವತಿಸದವರ ಬಾಕಿ ಮೊತ್ತಕ್ಕೆ ಕ್ರಮಕೈಗೊಂಡು ಸಲ್ಲಿಸದ ವೇಳೆ ಅಂಗಡಿಗಳನ್ನು ಮುಟ್ಟುಗೊಲು ಹಾಕಿಕೊಳ್ಳುವಂತೆ ಸೂಚಿಸಿದ ಅವರು ಪುರಸಭೆಯಿಂದ ಹಳೆ ಸಂತೇ ಮಾರುಕಟ್ಟೆ ಸರ್ವೆ ಕಾರ್ಯ ಬೇಗ ಮುಗಿಸಿದರೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಕೆಎಸ್ಆರ್ಟಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದೆಂದು ಸಭೆಯಲ್ಲಿ ತಿಳಿಸಿದರು.
ಪಟ್ಟಣದ ಎಲ್ಲಾ ಪುರಸಭಾ ಸದಸ್ಯರು ವಾರಕ್ಕೆ ಎರಡು ಬಾರಿ ತಮ್ಮ ವಾರ್ಡ್ಗಳಿಗೆ ಭೇಟಿ ನೀಡಿ ಜನತೆಯ ಸಮಸ್ಯೆಗಳನ್ನು ಬಗೆಹರಿಸುವಂತಾಗಬೇಕು, ಶುದ್ದ ಕುಡಿಯುವ ನೀರು, ಬೀದಿ ದ್ವೀಪ, ಚರಂಡಿಗಳ ಸ್ವಚ್ಚತೆ, ತಮ್ಮ ವಾರ್ಡ್ನಲ್ಲಿ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ಪಟ್ಟಣದ ಚಳ್ಳಕೆರೆ ರಸ್ತೆ, ಪೆನುಗೊಂಡ ರಸ್ತೆ, ಶಿರಾ ರಸ್ತೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವುದು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಜಾಗ ಗುರುತಿಸುವ, ಕನ್ನಿಕಾಪರಮೇಶ್ವರಿ ದೇವಾಲಯದ ಬಳಿ ರಸ್ತೆ ದುರಸ್ತಿ ಹಾಗೂ ಆ ವೃತ್ತಕ್ಕೆ ವಾಸವಿವೃತ್ತ ಎಂದು ನಾಮಕರಣ ಮಾಡುವ, ಪಟ್ಟಣದ ಎಪಿಎಂಸಿ, ಸರ್ಕಾರಿ ಆಸ್ಪತ್ರೆ, ತಾಲೂಕು ಪಂಚಾಯ್ತಿ, ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ಸೇರಿದಂತೆ ಅನಧಿಕೃತ ಅಂಗಡಿಗಳ ತೆರವಿಗೆ ಪುರಸಭಾ ಸದಸ್ಯರು ಒಪ್ಪಿಗೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ರಾಮಾಂಜಿನಪ್ಪ, ಉಪಾಧ್ಯಕ್ಷರಾದ ಸುಧಾಲಕ್ಷ್ಮಿ ಪ್ರಮೋದ್ಕುಮಾರ್, ಮುಖ್ಯಾಧಿಕಾರಿ ನವೀನ್ಚಂದ್ರ, ಸದಸ್ಯರಾದ ಸುದೇಶ್ಬಾಬು, ರಾಜೇಶ್, ರವಿ, ಮೊಹಮ್ಮದ್ ಇಮ್ರಾನ್, ಶಶಿಕಲಾ ಕೊಳಿ ಬಾಲಾಜಿ, ವೇಲುರಾಜು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ