ತುರುವೇಕೆರೆ : 27 ಗ್ರಾಪಂನ 401 ಸ್ಥಾನಗಳಿಗೆ 1004 ಅಭ್ಯರ್ಥಿಗಳು

 ತುರುವೇಕೆರೆ :

      ತಾಲ್ಲೂಕಿನ 27 ಗ್ರಾಮ ಪಂಚಾಯಿತಿಯ 401 ಸ್ಥಾನಗಳಿಗೆ 1004 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

      27 ಗ್ರಾಮ ಪಂಚಾಯಿಂದ 1286 ನಾಮಪತ್ರ ಸಲ್ಲಿಕೆಯಾಗಿದ್ದವು ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ ಶನಿವಾರ 282 ನಾಮಪತ್ರ ವಾಪಸ್ ಪಡೆಯುವ ಮೂಲಕ ಅಂತಿಮವಾಗಿ 1004 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿಯಿಂದ ಅತೀ ಹೆಚ್ಚು 52 ಅಭ್ಯರ್ಥಿಗಳು ಕಣದಲ್ಲಿದ್ದರೆ. ಕಣತೂರು ಕಡಿಮೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಾಲೂಕಿನಲ್ಲಿ 26 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಡವನಘಟ್ಟ ಗ್ರಾಮ ಪಂಚಾಯಿತಿಯ ಮುಗಳೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ವಾಪಸ್ಸ್ ಪಡೆದಿದ್ದರಿಂದ ಒಂದು ಸ್ಥಾನ ಖಾಲಿ ಉಳಿದಿದೆ.

ಅವಿರೋಧವಾದ ಆಯ್ಕೆ :

      ಅಮ್ಮಸಂದ್ರ ರೂರಲ್ 1, ಆನೆಕೆರೆ 4, ಮುನಿಯೂರು 2, ತಾಳಕೆರೆ 1, ಕೊಡಗಿಹಳ್ಳಿ 4, ತಂಡಗ 1, ಕಣತೂರು 4, ದಬ್ಬೇಘಟ್ಟ 3, ಮಾವಿನಕೆರೆ 2, ಸೊರವನಹಳ್ಳಿ 1, ಮನೆಚಂಡೂರು 1, ಶಟ್ಟಗೊಂಡನಹಳ್ಳಿ 1, ದಂಡಿನಶಿವರ 1 ಸೇರಿ ಒಟ್ಟು 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

      ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯಬೇಕು ಮತದಾರ ಮತ ಚಲಾಯಿಸಿ ಅಭ್ಯರ್ಥಿ ಆಯ್ಕೆ ಮಾಡಬೇಕು. ಒಬ್ಬರೇ ಅಭ್ಯರ್ಥಿಗಳು ಉಳಿದು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದ ತಾಲೂಕಿನ 26 ಅಭ್ಯರ್ಥಿಗಳನ್ನು ಈಗಲೇ ಅವಿರೋಧ ಅಭ್ಯರ್ಥಿಗಳು ಎಂದು ಘೋಷಣೆ ಮಾಡುವುದಿಲ್ಲ.

     ಈಗಾಗಲೇ ತಾಲೂಕಿನಲ್ಲಿ ದೇವಸ್ಥಾನದ ಹೆಸರಿನಲ್ಲಿ ಹರಾಜು ಪ್ರಕ್ರಿಯೆಗಳು ನಡೆದು ಕೇಸ್ ದಾಖಲಾಗಿದ್ದರಿಂದ ಸರ್ಕಾರದ ನಿರ್ದೇಶನದಂತೆ ಒಬ್ಬರೇ ನಾಮಪತ್ರ ಸಲ್ಲಿಸಿರುವ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ಸತ್ಯಾಸತ್ಯತೆ ತಿಳಿದು ಗ್ರಾಮಸ್ಥರ ಮಹಜರ್ ಹೇಳಿಕೆ ಪಡೆದು ಯಾವುದೇ ಹರಾಜು ನಡೆದಿಲ್ಲವೆಂದು ಖಚಿತವಾದ ನಂತರ ಘೋಷಣೆ ಮಾಡಲಾಗುವುದು. ಹರಾಜು ನಡೆದಿದ್ದರೆ, ಬೆದರಿಸಿ ನಾಮಪತ್ರ ಸಲ್ಲಿಸಲು ಬಿಡದಿದ್ದರೆ ಅಂತಹ ಅವಿರೋಧ ಆಯ್ಕೆಗಳನ್ನು ರದ್ದು ಮಾಡಲಾಗುವುದು ಎಂದು ತಹಶೀಲ್ದಾರ್ ನಯಿಂಉನ್ನಿಸಾ ತಹಶೀಲ್ದಾರ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap