ತುಮಕೂರು :

ಜಿಲ್ಲೆಯ ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ಪಾವಗಡ ತಾಲೂಕಿನಲ್ಲಿ ಮೊದಲ ಹಂತದ 168 ಗ್ರಾಮ ಪಂಚಾಯಿತಿಗಳ ಚುನಾವಣಾ ಮತದಾನವು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, 5 ತಾಲೂಕುಗಳಲ್ಲಿ ಶೇ.88.50ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ|| ಕೆ.ರಾಕೇಶ್ಕುಮಾರ್ ಅವರು ತಿಳಿಸಿದ್ದಾರೆ.
ತುಮಕೂರು ತಾಲೂಕಿನ 41 ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ 120099 ಪುರುಷರು, 120396 ಮಹಿಳೆಯರು ಹಾಗೂ 17 ಇತರೆ ಸೇರಿದಂತೆ ಒಟ್ಟು 240512 ಮತದಾರರ ಪೈಕಿ 104777 ಪುರುಷರು, 102548 ಮಹಿಳೆಯರು ಹಾಗೂ 6 ಇತರೆ ಸೇರಿದಂತೆ ಒಟ್ಟು 207331 ಮತದಾರರು ಮತ ಚಲಾಯಿಸಿದ್ದು ತಾಲೂಕಿನಲ್ಲಿ ಶೇ.86.20ರಷ್ಟು ಮತದಾನವಾಗಿದೆ.
ಅದರಂತೆ ಕುಣಿಗಲ್ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ 81279 ಪುರುಷರು, 78953 ಮಹಿಳೆಯರು ಸೇರಿದಂತೆ ಒಟ್ಟು 160232 ಮತದಾರರ ಪೈಕಿ 75148 ಪುರುಷರು, 71565 ಮಹಿಳೆಯರು ಸೇರಿದಂತೆ ಒಟ್ಟು 146713 ಮತದಾರರು ಮತ ಚಲಾಯಿಸಿದ್ದು ತಾಲೂಕಿನಲ್ಲಿ ಶೇ.91.56ರಷ್ಟು ಮತದಾನವಾಗಿದೆ.
ಗುಬ್ಬಿ ತಾಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಶೇ.88.53ರಷ್ಟು ಮತದಾನವಾಗಿದ್ದು, 92784 ಪುರುಷರು, 91578 ಮಹಿಳೆಯರು ಹಾಗೂ 13 ಇತರೆ ಸೇರಿದಂತೆ ಒಟ್ಟು 184375 ಮತದಾರರ ಪೈಕಿ 83460 ಪುರುಷರು, 79769 ಮಹಿಳೆಯರು ಸೇರಿದಂತೆ ಒಟ್ಟು 163229 ಮತದಾರರು ಮತ ಚಲಾಯಿಸಿದ್ದಾರೆ.
ಕೊರಟಗೆರೆ ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ 62549 ಪುರುಷರು, 62125 ಮಹಿಳೆಯರು ಹಾಗೂ 12 ಇತರೆ ಸೇರಿದಂತೆ ಒಟ್ಟು 124686 ಮತದಾರರ ಪೈಕಿ 56276 ಪುರುಷರು, 53670 ಮಹಿಳೆಯರು ಸೇರಿದಂತೆ ಒಟ್ಟು 109946 ಮತದಾರರು ಮತ ಚಲಾಯಿಸಿದ್ದು, ಶೇ.88.18ರಷ್ಟು ಮತದಾನವಾಗಿದೆ.
ಪಾವಗಡ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ 86168 ಪುರುಷರು, 81254 ಮಹಿಳೆಯರು ಹಾಗೂ 5 ಇತರೆ ಸೇರಿದಂತೆ ಒಟ್ಟು 167427 ಮತದಾರರ ಪೈಕಿ 76524 ಪುರುಷರು, 70884 ಮಹಿಳೆಯರು ಸೇರಿದಂತೆ ಒಟ್ಟು 147408 ಮತದಾರರು ಮತ ಚಲಾಯಿಸಿದ್ದು, ಶೇ.88.04ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತಪತ್ರ ತುಂಬಿದ ಮತ ಪೆಟ್ಟಿಗೆಗಳನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಿರುವ ಮತ ಎಣಿಕೆ ಕೇಂದ್ರಗಳಲ್ಲಿರುವ ಸ್ಟ್ರಾಂಗ್ ರೂಂಗಳಲ್ಲಿಟ್ಟು ಸೀಲ್ ಮಾಡಲಾಗಿದ್ದು, ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








