ತಿಪಟೂರು : ಶಾಲೆಗಳಲ್ಲಿ ಮಕ್ಕಳ ಚಿಲಿಪಿಲಿ ಕಲರವ ಆರಂಭ

 ತಿಪಟೂರು  : 

      ಕೊರೊನಾ ಮಹಾಮಾರಿ ಆವರಿಸಿ 2020ರ ಮಾರ್ಚ್ ಮಧ್ಯಭಾಗದಲ್ಲಿ ಮುಚ್ಚಿದ ಶಾಲೆಗಳು, ಇಂದು ಪ್ರಾರಂಭಗೊಂಡು ಶಾಲೆಗಳಲ್ಲಿ ಎಂದಿನಂತೆಇಲ್ಲದಿದ್ದರೂ ಸಾಮಾಜಿಕಅಂತರದೊಂದಿಗೆ ಮಕ್ಕಳ ಚಿಲಿಪಿಲಿ ಕಲರವ ಕೇಳುವಂತಾಗಿ ಶಾಲೆಗಳು ಕಳೆಗಟ್ಟುತ್ತಿವೆ.

      ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಕ್ಕು ಮುಚ್ಚಿದ್ದ ಶಾಲೆಗಳು ಇಂದುತೆರೆದಿವೆ. 2020 ಜೂನ್‍ನಲ್ಲಿ ವಿದ್ಯಾಗಮ ಎಂದು ತೆರೆದು ವಿದ್ಯಾರ್ಥಿಗಳಿರುವಲ್ಲಿಗೆ ಶಿಕ್ಷಕರು ತೆರಳಿ ಪಾಠಮಾಡುತ್ತಿದ್ದು, ಆದರೆ ಇದರಿಂದ ಸೊಂಕು ಹರಡುತ್ತದೆ ಎಂಬ ಭೀತಿಯಿಂದ ಸಂಪೂರ್ಣವಾಗಿ ನಿಂತುಹೋಗಿದ್ದ ಶಾಲೆಗಳು ಇಂದು ಮತ್ತೆ ಆರಂಭಗೊಂಡಿದೆ. ವಿದ್ಯಾರ್ಥಿ ಹಾಗೂ ಪೋಷಕರು ಮತ್ತು ಶಿಕ್ಷಕ ವೃಂದಕ್ಕೂ ಮತ್ತೆ ಚೈತನ್ಯ ಸಿಕ್ಕಂತಾಗಿದ್ದು ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರಒಪ್ಪಿಗೆ ಪತ್ರದೊಂದಿಗೆ ಶಾಲೆಗೆ ಹಾಜರಾಗಿ ಖುಷಿಯಾಗಿ ಪಾಠ ಪ್ರವಚನಗಳನ್ನು ಕೇಳಿದರು.

      ಶಾಲಾ ಕೊಠಡಿಗಳು ಸಂಪೂರ್ಣ ಸ್ಯಾನಿಟೈಜೆಷನ್: ವಿದ್ಯಾರ್ಥಿಗಳಲಿಲದೆ ಸೊರಗಿದ್ದ ಶಾಲೆಗಳನ್ನು ಸ್ವಚ್ಛಮಾಡಿ ಸ್ಯಾನಿಟೈಜೆಷನ್ ಮಾಡಿ, ವಿದ್ಯಾರ್ಥಿಗಳನ್ನು ಸ್ವಾಗತಿಸಲು ತಳಿರು ತೋರಣಗಳಿಂದ ಅಲಂಕರಿಸಿ, ಮುಖ್ಯವಾಗಿಕೊರೊನಾದ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ತಿಳಿಸುವ ಫ್ಲೆಕ್ಸ್‍ಗಳು ಕಾಣುತ್ತಿದ್ದವು.

ಖುಷಿಯಿಂದ ಬಂದ ವಿದ್ಯಾರ್ಥಿಗಳು :

      ಸುಮಾರು 9 ತಿಂಗಳಿಂದ ಮನೆಗಳಲ್ಲೇ ಬಂಧಿಯಾಗಿದ್ದ ವಿದ್ಯಾರ್ಥಿಗಳು ತಮ್ಮ ಪೋಷಕರಒಪ್ಪಿಗೆ ಪತ್ರದೊಂದಿಗೆ ಲವಲವಿಕೆಯಿಂದ ಶಾಲೆಗಳನ್ನು ಕಂಡ ಖುಷಿಯಲ್ಲಿ ಕುಣಿಯುತ್ತಾ ಬಂದತಮ್ಮ ಸ್ನೇಹಿತರನ್ನು ಭೇಟಿಯಾಗಿ ಉಭಯಕುಷಲೋಪರಿ ವಿಚಾರಿಸುವಾಗಲೇ ಪ್ರತ್ಯಕ್ಷವಾದ ಶಿಕ್ಷಕರು ಹೀಗೆ ಹತ್ತಿರಕೂರಬೇಡಿ ಎಂದು ಸಾಮಾಜಿಕಅಂತರದ ಪಾಠಮಾಡಿದ ಸಂದರ್ಭದಲ್ಲಿ ಉಸಿರಾಟ ಕೋಪದಿಂದಲೇಕೊರೊನಾ ಸೂಚನೆಯಂತೆದೂರ ಕುಳಿತ ಮಕ್ಕಳು ತಮ್ಮಜ್ಞಾನಾರ್ಜನೆಗೆಯಾವಕೊರೊನಾಏನುಮಾಡುವುದಿಲ್ಲವೆಂಬ ಧೃಡವಿಶ್ವಾಸದಲ್ಲಿದ್ದು ಶಾಲೆತೆರೆದರು ನಾವು ಸಾಮಾಜಿಕಅಂತರವನ್ನುಕಾಪಾಡಿಕೊಂಡು ವಿದ್ಯಾಭ್ಯಾಸವನ್ನು ಮಾಡುತ್ತೇವೆಂಬ ಧೈರ್ಯದಲ್ಲಿದ್ದರು.

ಬಿಸಿಯೂಟ ಬಿಟ್ಟು ಎಲ್ಲವೂ ಇದೆ:

      ಶಾಲೆಗಳು ಇಂದಿನಿಂದ ಪಾಳಿಯ ಮೇಲೆ ಪ್ರಾರಂಭವಾಗಿವೆ. ಆದರೆ ಶಾಲೆಗಳಲ್ಲಿ ಬಿಸಿಯೂಟವನ್ನು ಬಿಟ್ಟು ಎಲ್ಲವೂಇದೆ, ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ತಮಗೆ ಸಾಕಷ್ಟು ಕುಡಿಯುವ ನೀರನ್ನು ತರಬೇಕು, ಮಾಸ್ಕ್ ಧರಿಸಿರಬೇಕು. ಬಿಸಿಯೂಟವಿಲ್ಲದಿದ್ದರು ವಿದ್ಯಾರ್ಥಿಗಳ ಪಾಲಿನ ದಿನಸಿಯನ್ನು ಶಾಲೆಯಲ್ಲೇ ವಿತರಿಸುವುದಾಗಿ ಸರ್ಕಾರವೇ ತಿಳಿಸಿದೆ.

ಶಾಲೆ ಪ್ರಾರಂಭ ಪೋಷಕರ ಮುಖದಲ್ಲಿ ನಗು :

      ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಅಂತಿಮ ಪದವಿ ತರಗತಿಗಳನ್ನು ಪರೀಕ್ಷೆ ಮಾಡಿದ್ದು ಶಾಲೆಯಲ್ಲಿ ಮಾಡಿದ್ದ ಪಾಠಗಳಿಂದ ಹೇಗೋ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಆದರೆ ಈ ಬಾರಿ 2019-20ನೇ ಸಾಲಿನ ಮುಗಿಯಲುಕೊನೆಯ 3 ತಿಂಗಳು ಇದ್ದರು ಶಾಲೆಗಳು ಪ್ರಾರಂಭವಾಗಿಲ್ಲ ಈ ಬಾರಿಯ ಮಕ್ಕಳ ಪರಿಸ್ಥಿತಿ ಏನು ಎಂದು ಮಂಕಾಗಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳ ಮುಖದಲ್ಲಿಇಂದು ಏನೋ ಒಂದುರೀತಿಯ ಸಂತಸಕಾಣುತ್ತಿದ್ದು ನಮ್ಮಒಂದು ವರ್ಷ ಹಾಳಾಗುವುದಿಲ್ಲವೆಂಬ ನಂಬಿಕೆಯಲ್ಲಿ ಪೋಷಕರಿದ್ದಾರೆ.

ಮಕ್ಕಳು ಶಾಲೆಗೆ ಆಗಮಿಸಿರುವುದು ನನಗೆ ಸೇರಿದಂತೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಬಹಳ ಸಂತೋಷವಾಗಿದ್ದು ಶಿಕ್ಷಕರು ಕಲಿಸಲು ಉತ್ಸುಕರಾದರೆ ಮಕ್ಕಳು ಕಲಿಯಲುಉತ್ಸುಕರಾಗಿದ್ದುಉತ್ತಮಕಲಿಕಾವಾತಾವರಣ ನಿರ್ಮಾಣವಾಗಿದೆ.

– ಮುಖ್ಯಶಿಕ್ಷಕರು. ಎಸ್.ಪಿ.ಎಸ್. ಆಂಗ್ಲ ಪಾಧ್ಯಮ ಶಾಲೆ, ಕೆರೆಗೋಡಿ-ರಂಗಾಪುರ

      ಮಕ್ಕಳ ಜಾಗೃತೆಯದೃಷ್ಠಿಯಿಂದಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಹಾಗೂ ಪ್ರತಿಕೊಠಡಿಯಲ್ಲಿ 20 ಮಕ್ಕಳನ್ನು ಪ್ರತಿಡೆಸ್ಕ್‍ಗೆಇಬ್ಬರಂತೆ ಕುಳ್ಳರಿಸಿ ಪಠ್ಯವನ್ನು ಬೋಧಿಸಲಾಗುತ್ತದೆಇದಕ್ಕಾಗಿ ಶಿಕ್ಷಕರನ್ನು ಪಾಳಿಯ ಮೇರೆಗೆ 10-12 ತಂಡಗಳನ್ನಾಗಿ ಮಾಡಲಾಗಿದೆ.ಆನ್‍ಲೈನ್ ಪಾಠಗಳಿಗಿಂತ ತರಗತಿ ಬೋದನೆಯು ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಜೊತೆಗೆ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ.

– ಚನ್ನೇಗೌಡ, ಮುಖ್ಯಶಿಕ್ಷಕರು.ಜಿ.ಜಿ.ಜೆ.ಸಿ. ತಿಪಟೂರು

      ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸಾಮಾಜಿಕಅಂತರವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದ್ದು ಪ್ರತಿ ಮಕ್ಕಳಿಗೂ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದ್ದು, ಸ್ವಲ್ಪ, ಜ್ವರ, ನೆಗಡಿ-ಕೆಮ್ಮು ಇರುವ ಮಕ್ಕಳನ್ನು ಶಾಲಗೆ ಕಳುಹಿಸಿಬಾರದೆಂದು ಪೋಷಕರಿಗೆ ತಿಳಿಸಲಾಗಿದೆ.

– ಉಮೇಶ್‍ಗೌಡ, ಮುಖ್ಯಶಿಕ್ಷಕರು.ಜಿ.ಬಿ.ಜೆ.ಸಿ. ತಿಪಟೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link