ಮಿಡಿಗೇಶಿ :
ಜ. 6 ರಂದು ಮಧ್ಯರಾತ್ರಿಯಲ್ಲಿ ಮಿಡಿಗೇಶಿ ಹೋಬಳಿ ವ್ಯಾಪ್ತಿಯ ಹನುಮಂತಪುರ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಮಲಗಿದ್ದ ಗೋವಿಂದಪ್ಪ (72) ಎಂಬುವರ ಮೇಲೆ ಕರಡಿ ದಾಳಿ ಮಾಡಿದೆ. ಅವರ ಎಡಗೈ ತೋಳಿಗೆ ಕರಡಿ ಕಚ್ಚಿ ಗಾಯವಾಗಿದೆ.
ನಂತರ ಕರಡಿಯು ಇಲ್ಲಿನ ಈಶ್ವರ ದೇವಸ್ಥಾನದಲ್ಲಿರಿಸಿದ್ದ ದೀಪದ ಎಣ್ಣೆ ಕುಡಿದು ಹೋಗಿರುತ್ತದೆ. ಗಾಯಾಳು ಮಿಡಿಗೇಶಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೃಥಮ ಚಿಕಿತ್ಸೆ ಪಡೆದು, ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಮೇಲಿಂದ ಮೇಲೆ ಕರಡಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಜನತೆಯ ಮೇಲೆ ಎರಗಿ, ಪ್ರಾಣಾಂತಿಕ ಹಲ್ಲೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಆದರೂ ಅರಣ್ಯ ಇಲಾಖೆಯವರಾಗಲಿ, ಸಂಬಂಧಿಸಿದ ಇತರರಾಗಲಿ ಯಾವುದೆ ಕ್ರಮ ಕೈಗೊಳ್ಳದೆ ಜನತೆಯ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ