ತುಮಕೂರು:

ಕೆಲವು ಅಂಗಡಿಗಳಲ್ಲಿ ಸಿಗರೇಟ್, ಗುಟ್ಕಾ ಇನ್ನಿತರೆ ಬಳಕೆ ವಸ್ತುಗಳ ಮೇಲೆ ಹೆಚ್ಚಿನ ದರ ವಿಧಿಸುತ್ತಿದ್ದು, ನಿಗದಿತ ದರಕ್ಕಿಂತಲೂ ಹೆಚ್ಚಿನ ದರ ಪಡೆಯುತ್ತಿರುವ ದೂರುಗಳು ಕೇಳಿಬರುತ್ತಿವೆ.
ಒಂದು ಸಿಗರೇಟ್ ಪ್ಯಾಕ್ ಸಗಟು ದರ 165 ರೂ. ಇರುತ್ತದೆ. ಹೋಲ್‍ಸೇಲ್ ದರದಲ್ಲಿ ಕಂಪನಿಗಳು ಅಂಗಡಿಗಳಿಗೆ ಮಾರುವಾಗ ಲಾಭ ಬರುವಂತೆ ದರ ನಿಗದಿ ಮಾಡಲಾಗಿರುತ್ತದೆ. ಒಂದು ಸಿಗರೇಟ್‍ಗೆ 17 ರೂ. ಪಡೆದರೆ ಚಿಲ್ಲರೆ ವ್ಯಾಪಾರಸ್ಥರಿಗೆ 1 ರೂ. ಲಾಭ ಸಿಗುತ್ತದೆ. ಹೀಗಿದ್ದರೂ ಸಹ ಗ್ರಾಹಕರಿಗೆ ಮಾರಾಟ ಮಾಡುವಾಗ 18 ರೂ.ಗಳಿಂದ ಹಿಡಿದು 20 ರೂ.ಗಳ ತನಕ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಒಂದು ಪ್ಯಾಕ್‍ನ 1 ಸಿಗರೇಟ್‍ಗೆ ಕಂಪನಿಯ 1 ರೂ. ಲಾಭ ಹಾಗೂ ಅಧಿಕವಾಗಿ ಗ್ರಾಹಕರಿಂದ ಪಡೆಯುವ 2 ರೂ. ಲಾಭ. ಸೇರಿ ಮೂರು ರೂ.ಗಳ ತನಕ ಪಡೆದರೆ ಒಂದು ಪ್ಯಾಕ್‍ಗೆ ಎಷ್ಟಾಗಬಹುದು ಎನ್ನುತ್ತಾರೆ ಕೆಲವು ಪ್ರಜ್ಞಾವಂತರು.
ಸಿಗರೇಟ್, ಗುಟ್ಕಾ, ಪಾನ್ ಇತ್ಯಾದಿ ವಸ್ತುಗಳ ಮೇಲೆಲ್ಲ ಹೀಗೆ ಹೆಚ್ಚು ದರ ಪಡೆಯಲಾಗುತ್ತದೆ. ಗ್ರಾಹಕರು ವಿಧಿಯಿಲ್ಲದೆ 1 ರೂ. ಅಥವಾ 2 ರೂ.ಗಳ ಬಗ್ಗೆ ಪ್ರಶ್ನಿಸಲು ಹೋಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಚಿಲ್ಲರೆ ವ್ಯಾಪಾರಗಾರರು ಅಧಿಕ ಬೆಲೆಗೆ ಮಾರುತ್ತಾರೆ. ಎಂ.ಆರ್.ಪಿ. ದರಕ್ಕಿಂತಲೂ ಹೆಚ್ಚು ಮಾರಬಾರದು ಎಂದಿದ್ದರೂ ಸಹ ಅದರ ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಕಂಪನಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಗಮನ ಹರಿಸಬೇಕು ಎನ್ನುತ್ತಾರೆ ಕೆಲವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








