ಹುಳಿಯಾರು : ಯುವ ಕಾಂಗ್ರೆಸ್ ಚುನಾವಣೆಗೆ ಬಿರುಸಿನ ಆನ್‍ಲೈನ್ ಮತದಾನ

 ಹುಳಿಯಾರು :

     ಯುವ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸೋಮವಾರ ಆನ್‍ಲೈನ್ ಮತದಾನ ನಡೆದಿದ್ದು ತಾಲೂಕಿನಲ್ಲಿ ಬಿರುಸಿನ ಮತದಾನ ನಡೆಯಿತು.

     ಈ ಬಾರಿ ಆನ್‍ಲೈನ್ ಮೂಲಕ ಮತದಾನ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ, ತಾಲ್ಲೂಕು ಅಧ್ಯಕ್ಷ ಹಾಗೂ ಹುಳಿಯಾರು ಬ್ಲಾಕ್ ಅಧ್ಯಕ್ಷ ಹೀಗೆ ಒಬ್ಬ ಯುವ ಮತದಾರ ನಾಲ್ಕು ಮತಗಳನ್ನು ಹಾಕಬೇಕಿತ್ತು.

      ಚಿಕ್ಕನಾಯಕನಹಳ್ಳಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಾಲುಗೋಣ ಚೇತನ್ ಅವರೊಬ್ಬರೇ ಅಭ್ಯರ್ಥಿಯಾಗಿದ್ದರು. ಹಾಗಾಗಿ ಈ ಸ್ಥಾನವೊಂದನ್ನು ಬಿಟ್ಟು ಉಳಿದ 3 ಸ್ಥಾನಗಳಿಗೂ ಪೈಪೋಟಿ ಏರ್ಪಟ್ಟಿತ್ತು. ಹುಳಿಯಾರು ಬ್ಲಾಕ್‍ಗೆ ದಿವಾಕರ ಹಾಗೂ ಯೋಗೀಶ್ ಇಬ್ಬರು ಸ್ಪರ್ಧಿಸಿದ್ದರಿಂದ ಚುನಾವಣಾ ಕಾವು ಹೆಚ್ಚಿದ್ದು ಜಿದ್ದಾಜಿದ್ದಿನ ಚುನಾವಣೆ ನಡೆಯಿತು.

      ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಮತದಾನ ನಡೆದಿದ್ದು ಅಭ್ಯರ್ಥಿಗಳ ಪೈಕಿ ಹೆಚ್ಚು ಮತಗಳನ್ನು ಪಡೆದವರು ಅಧ್ಯಕ್ಷರಾಗುತ್ತಾರೆ. ಎರಡನೇ ಹೆಚ್ಚು ಮತಗಳನ್ನು ಪಡೆದವರು ಉಪಾಧ್ಯಕ್ಷರಾಗುತ್ತಾರೆ. ಮೂರನೇ ಸ್ಥಾನ ಪಡೆದವರು ಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಹೀಗಾಗಿ, ಸ್ಪರ್ಧಿಸಿದವರಿಗೆಲ್ಲರಿಗೂ ಹುದ್ದೆ ಖಚಿತವಾಗಿ ಸಿಗುತ್ತದೆ. ಆದರೂ ಅಧ್ಯಕ್ಷ ಸ್ಥಾನ ನಮ್ಮ ಗುಂಪಿನವರಿಗೆ ಸಿಗಲಿ ಎನ್ನುವ ಕಾರಣದಿಂದ ಮುಂಖಂಡರೂ ಪ್ರಚಾರ ಮಾಡಿದರು.

      ಈ ಬಾರಿ ಸದಸ್ವತ್ಯ ನೋಂದಣಿಯನ್ನು ಆನ್‍ಲೈನ್‍ನಲ್ಲಿ ಮಾಡಲಾಗಿದ್ದು ಮತದಾನವನ್ನೂ ಆನ್‍ಲೈನ್‍ನಲ್ಲೇ ನಡೆಸಲಾಗುತ್ತಿದೆ. ಸದಸ್ಯರು ಮೊಬೈಲ್‍ನಲ್ಲಿ ಆಪ್ ಡೌನ್‍ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಂಡರೆ ಮೊಬೈಲ್‍ಗೆ ಒಟಿಪಿ ಬರುತ್ತದೆ. ಒಟಿಪಿ ಬಳಸಿಕೊಂಡು ಮತದಾನ ಮಾಡಬೇಕಾಗುತ್ತದೆ. ಹಾಗಾಗಿ ಅಭ್ಯರ್ಥಿಗಳ ಕಡೆಯವರು ಮತದಾರರ ಮನೆಮನೆಗೆ ತೆರಳಿ ಮತಹಾಕಿಸಿಕೊಳ್ಳಲು ಬಿರುಸಿನ ಪೈಪೋಟಿ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link