ತುರುವೇಕೆರೆ :

ಹೆಜ್ಜೇನು ದಾಳಿಗೆ ತೀವ್ರ ಅಸ್ವಸ್ಥಗೊಂಡ ರೈತನೋರ್ವ ಸಾವನ್ನಪಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಜಡೆಯಾ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಜಡೆಯಾ ನಿವಾಸಿ ಮೂಲೆಮನೆ ಪುಟ್ಟೇಗೌಡರು(75) ಸೋಮವಾರ ಬೆಳಗ್ಗೆ ತೋಟಕ್ಕೆ ತೆರಳಿದ ವೇಳೆ ಆಕಸ್ಮಿಕವಾಗಿ ನೂರಾರು ಹೆಜ್ಜೇನುಗಳು ಪುಟ್ಟೇಗೌಡರ ಮೇಲೆ ದಾಳಿ ನಡೆಸಿ ಕಚ್ಚಿವೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪುಟ್ಟೇಗೌಡರನ್ನು ಅಕ್ಕಪಕ್ಕದ ತೋಟದವರು ಮಾಯಸಂದ್ರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸಿನ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮೃತ ಪುಟ್ಟೇಗೌಡರು ಊರಿನ ಗುಡಿಗೌಡರಾಗಿದ್ದರು. ಮೂವರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








