ಬರಗೂರು :
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಡಾ.ವಿರೇಂದ್ರ ಹೆಗ್ಗಡೆಯವರು ಕೆರೆಗಳ ಹೂಳೆತ್ತುವ ಕಾಮಗಾರಿ ಕಾರ್ಯ ಕೈಗೊಳ್ಳುತ್ತಿರುವುದು ಮೆಚ್ಚುವಂತದ್ದು. ಈ ಯೋಜನೆಯಿಂದ ರೈತರ ಹಾಗೂ ಜನರ ಕುಡಿಯುವ ನೀರಿನ ಅಂತರ್ಜಲ ವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ತಿಳಿಸಿದರು.
ಅವರು ಶಿರಾ ತಾಲ್ಲೂಕಿನ ಕೆರೆಯಾಗಲಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೋಮವಾರ ಆಯೋಜಿಸಿದ್ದ ‘ನಮ್ಮೂರು, ನಮ್ಮ ಕೆರೆ’’ ಕಾರ್ಯಕ್ರಮದಡಿಯಲ್ಲಿ 16.60 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳೆತ್ತುವÀ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೆರೆಯಾಗಲಹಳ್ಳಿ ಕೆರೆ 43 ಎಕರೆ ವಿಸ್ತೀರ್ಣವುಳ್ಳದ್ದಾಗಿದೆ. ಕೆರೆ ಹೂಳೆತ್ತಿದರೆ ಈ ಮಣ್ಣು ರೈತನ ಜಮೀನಿಗೆ ಫಲವತ್ತತೆಯನ್ನು ನೀಡುತ್ತದೆ. ಅಲ್ಲದೆ ಮಳೆಗಾಲದಲ್ಲಿ ನೀರು ಹೆಚ್ಚು ಸಂಗ್ರಹವಾಗುವ ಕಾರಣ ಅಂತರ್ಜಲ ಮಟ್ಟ ವೃದ್ಧಿಗೆ ಕಾರಣವಾಗಲಿದೆ. ಕೆರೆ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಲಿದೆ. ರಾಜ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ನೀಡಿದೆ. ಜೊತೆಗೆ 252 ಕೆರೆಗಳ ಪುನಶ್ಚೇತನಗೊಳಿಸುವ ಮೂಲಕ ಅಂತರ್ಜಲ ಮಟ್ಟ ಸುಧಾರಣೆಗೆ ಬಹುದೊಡ್ಡ ಕೊಡುಗೆ ನೀಡಿದೆ. ನಿಜವಾಗಿಯು ಡಾ.ವಿರೇಂದ್ರ ಹೆಗ್ಗಡೆಯವರು ಭಾರತ ರತ್ನ ಪಡೆಯಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ ಎಂದರು.
ರೇಷ್ಮೆ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ಬಡ ಕುಟುಂಬ ಗಳಿಗೆ ಜೀವನದ ಶಿಸ್ತು ಕಲಿಸಿ, ಸಣ್ಣ ಸಣ್ಣ ಕಸುಬುಗಳಿಗೆ ಆರ್ಥಿಕ ಸಹಕಾರ ನೀಡಿ, ಸ್ವಾವಲಂಬಿಗಳಾಗಿ ಪರಿವರ್ತನೆಗೊಳಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ iÉೂೀಜನೆಯ ಕೊಡುಗೆÉ ಅಪಾರ. ಕೆರೆ ಕಾಮಗಾರಿಯನ್ನು ನಿಷ್ಠೆ ಶ್ರದ್ಧೆಯಿಂದ ಮಾಡಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವುದು ಶ್ಲಾಘನೀಯ. ಸಾಕಷ್ಟು ಮದ್ಯ ವ್ಯಸನಿಗಳು ಶ್ರೀಕ್ಷೇತ್ರ ಹಮ್ಮಿಕೊಂಡ ಶಿಬಿರದಲ್ಲಿ ಪಾಲ್ಗೊಂಡು ಕುಡಿತ ಬಿಟ್ಟು ಪರಿವರ್ತನೆಯಾಗಿರುವುದರ ಕೀರ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಲ್ಲುತ್ತದೆ ಎಂದರು.
ಮುಖಂಡ ಶ್ರೀರಂಗಯಾದವ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ಉಮಾ, ಗ್ರಾಪಂ ಸದಸ್ಯ ಕೆ.ಹೆಚ್.ರವಿ, ವಲಯ ಮೇಲ್ವಿಚಾರಕ ಲೋಕೇಶ್, ನರಸಿಂಹಮೂರ್ತಿ, ಹೇಮನಾರಾಯಣ, ಕೆರೆ ಸಮಿತಿ ಅಧ್ಯಕ್ಷ ಶ್ರೀಕಂಠಪ್ಪ, ಲಕ್ಕನಹಳ್ಳಿ ಮಂಜುನಾಥ್, ಮಾಲಿಗೌಡ, ಮಾಜಿ ಚೇರ್ಮನ್ ಮೂಡಲಗಿರಿಯಪ್ಪ, ಮುಕುಂದೇಗೌಡ, ಪ್ರಕಾಶಗೌಡ, ದಾಸಪ್ಪ, ಪ್ರತಾಪ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ