‘ಯುವಜನರ ಗುಣಮಟ್ಟವೇ ದೇಶದ ಗುಣಮಟ್ಟ’ – ಡಿಸಿಎಂ ಅಶ್ವತ್ಥನಾರಾಯಣ

 ತುಮಕೂರು : 

      ದೇಶದ ಭವಿಷ್ಯ ಯುವಜನರ ಕೈಯ್ಯಲಿದ್ದು, ಯುವಜನರೇ ಗುಣಮಟ್ಟವೇ ದೇಶ ಗುಣಮಟ್ಟದ ಮಾನದಂಡವಾಗಿದೆ. ಈ ದಿಸೆಯಲ್ಲಿ ಯುವ ಜನರು ಜ್ಞಾನ ಪಡೆಯುವ ಜೊತೆಗೆ ಉತ್ತಮ ಕೌಶಲ್ಯವನ್ನು ತಮ್ಮದಾಗಿಸಿಕೊಂಡು ರಾಷ್ಟ್ರಕ್ಕೆ ಕೊಡುಗೆ ನೀಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಲಹೆ ನೀಡಿದರು.

      ಪ್ರಜಾಪ್ರಗತಿ-ಪ್ರಗತಿ ವಾಹಿನಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಡೆದ ಜಾಗೃತ ಯುವ ಭಾರತ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

      ಅಸಹಾಯಕತೆಯೆಂಬುದು ಯುವಜನರ ಹತ್ತಿರ ಸುಳಿಯಬಾರದು. ಕಲಿಕಾ ಅವಧಿಯಲ್ಲಿ ನಮಗೆ ನಾನಾ ಕೊರತೆಗಳು ಎದುರಾಗುತ್ತವೆ. ಶಾಲಾ-ಕಾಲೇಜುಗಳಲ್ಲಿ ಸೌಲಭ್ಯಗಳ ಕೊರತೆಯಿರಬಹುದು. ಮನೆಯಲ್ಲಿ ಓದಿಸಲು ಸಂಕಷ್ಟದ ಪರಿಸ್ಥಿತಿ ಇರಬಹುದು. ಇವೆಲ್ಲವನ್ನು ಮೆಟ್ಟಿನಿಂತು ಯುವಜನತೆ ಸಾಧನೆಯ ಪಥದಲ್ಲಿ ಹೆಜ್ಜೆಹಾಕಬೇಕು. ಹಗಲು ಕನಸು ಕಾಣುತ್ತಾ ಕೂತರೆ ಯಾವುದೇ ಪ್ರಯೋಜನವಿಲ್ಲ. ಆಸಕ್ತಿ ಸ್ಫೂರ್ತಿ ಪ್ರಯತ್ನದ ಮೂಲಕ ಹೆಜ್ಜೆಹಾಕಬೇಕೆಂದರು.

      ಮಹಾಯುದ್ದದಲ್ಲಿ ಸಂಪೂರ್ಣ ನಲುಗಿದ್ದ ಜರ್ಮನಿ, ಜಪಾನ್ ಪುನರ್ ನಿರ್ಮಾಣ ಆಗಿದ್ದು ಆದೇಶದ ಬದ್ದತೆಯ ಮಾನವ ಸಂಪನ್ಮೂಲದಿಂದ. ನಾವು ದೇಶದ ಬದ್ದತೆಯ ಮಾನವ ಸಂಪನ್ಮೂಲವಾಗಬೇಕಿದೆ. ಸ್ವಾಮಿ ವಿವೇಕಾನಂದರು ಬಯಸಿದ್ದು ಸಹ ಇದನ್ನೇ  ರ್ಧಾತ್ಮಕತೆಯಿಂದ ಮುನ್ನುಗ್ಗಬೇಕಿದೆ. ಜೀವನ ಪೂರ್ತಿ ಸವಾಲು, ಸಮಸ್ಯೆ ಹೆಚ್ಚುತ್ತದೆ ಹೊರತು ಕಡಿಮೆಯಾಗೋಲ್ಲ. ಇದಕ್ಕೆ ಕೊರಗುತ್ತಾ ಕೂರದೇ ವಿಶ್ವಾಸದಿಂದ ಮುಂದುವರಿಯಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದು, ಭಾರತದಲ್ಲಿ ವಿಪುಲ ಅವಕಾಶವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ. ಪ್ರಜಾಪ್ರಗತಿ-ಪ್ರಗತಿ ವಾಹಿನಿ ಈ ದಿಸೆಯಲ್ಲಿ ಯುವಜನರಿಗೆ ಅರಿವು ಮೂಡಿಸುವ ಉತ್ತಮ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯ ಎಂದರು.

     ವಿವೇಕಾನಂದರ ವಿಚಾರಧಾರೆ ತಿಳಿಯಿರಿ:

      ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ವಿವೇಕಾನಂದರ ವಿಚಾರಧಾರೆಯನ್ನು ಅರಿತು ಮುನ್ನೆಡೆದರೆ ಪ್ರತೀ ವಿದ್ಯಾರ್ಥಿಯೂ ಯಶಸ್ಸಿನ ಹಾದಿಯಲ್ಲಿ ಸಾಗಬಹುದು. ಬದುಕುವುದಷ್ಟೇ ಮುಖ್ಯವಲ್ಲ. ಮೌಲ್ಯದೊಂದಿಗೆ ಬದುಕುವುದು ಅಷ್ಟೇ ಮುಖ್ಯ. ಯುವಜನರು ಸವಾಲುಗಳಿಗೆ ಅಂಜದೆ ನಿರ್ಭೀತಿಯಿಂದ ಬಾಳುವುದನ್ನು ಕಲಿಯಬೇಕು ಎಂದು ಹೇಳಿ ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ಜಿಲ್ಲೆಯ ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರಕ್ಕೆ ಮಾಧ್ಯಮದ ಮುಖೇನ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದರು.

      ಶಾಸಕ ಜಿ.ಬಿ.ಜ್ಯೋತಿಗಣೇಶ್ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿ ಗುರಿ ಇಟ್ಟುಕೊಂಡೇ ಜೀವನದಲ್ಲಿ ಪ್ರತಿಯೊಬ್ಬರು ಮುಂದುವರಿಯಬೇಕು. ಗುರಿ ಪ್ರಯತ್ನವಿಲ್ಲದ ಸಾಧನೆ ಅಸಾಧ್ಯ. ಆದರೆ ಸದಾ ಗೆಲುವೇ ಸಿಗುತ್ತದೆಯೆಂಬುದನ್ನು ಬಿಟ್ಟು, ವೈಫಲ್ಯಗಳನ್ನು ಸಮಾನಾಂತರವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ಶಿಕ್ಷಕರಲ್ಲಿ ಬದ್ದತೆ ಕುಸಿತ:

      ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಬದ್ದತೆ ಕುಸಿಯುತ್ತಿರುವುದು ಕಲಿಕೆಯ ಗುಣಮಟ್ಟ ಇಳಿಕೆಗೆ ಕಾರಣವಾಗಿದೆ. ವಿವೇಕಾನಂದರ ವಾಣಿಯಂತೆ ಏಳೆ ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂಬುದು ಸದಾ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಿರಬೇಕು. ಆಗ ಮಾತ್ರ ಸಾಧಕರಾಗುವುದು ಎಂದು ಕಿವಿಮಾತು ಹೇಳಿದರು.

     ರಾಜ್ಯ ರೆಡ್‍ಕ್ರಾಸ್ ಸಭಾಪತಿ ಹಾಗೂ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಸಹ ಸಂಪಾದಕರಾದ ಟಿ.ಎನ್.ಮಧುಕರ್, ಪ್ರಗತಿ ವಾಹಿನಿ ಸಿಇಒ ಟಿ.ಎನ್.ಶಿಲ್ಪಶ್ರೀ, ಸಿಐಟಿ ನಿರ್ದೇಶಕ ಡಾ.ಡಿ.ಎಸ್.ಸುರೇಶ್, ವಿದ್ಯಾವಾಹಿನಿ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್‍ಕುಮಾರ್, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಟಿ.ಮುದ್ದೇಶ್, ಡಾ.ಯು.ಡಿ.ನಾಗೇಂದ್ರ, ಮಹಿಳಾ ಪದವಿ ಕಾಲೇಜು ಪ್ರಾಚಾರ್ಯೆ ಡಾ.ಲೀಲಾಲೇಪಾಕ್ಷ್ ತುಮಕೂರು ವಿವಿ ಸಿಂಡಿಕೇಟ್ ಸದಸ್ಯರು, ಪ್ರಾಂಶುಪಾಲೆ ಅಕ್ಕಮ್ಮ ಮತ್ತಿತರರು ಹಾಜರಿದ್ದರು. ಅನನ್ಯ, ವಿದ್ಯೋದಯ, ವಿದ್ಯಾವಾಹಿನಿ, ಸಿಐಟಿ, ವಿದ್ಯಾನಿಧಿ, ಸರ್ವೋದಯ, ತುಮಕೂರು ವಿವಿ, ಎಸ್‍ಐಟಿ, ಎಸ್‍ಎಸ್‍ಐಟಿ, ಎಸ್‍ಎಸ್‍ಸಿಎಂಎಸ್ ಸೇರಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು. ಸಾ.ಚಿ.ರಾಜ್‍ಕುಮಾರ್ ಸಂವಾದ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link