ತುಮಕೂರು :
ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಯಶಸ್ವಿನಿ ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಜಿಲ್ಲೆಯ ಪೊಲೀಸರ ಪ್ರಯಾಣ ಭತ್ಯೆ ಮೊತ್ತ 20 ಲಕ್ಷ ರೂ.ಗಳ ದುರುಪಯೋಗದ ಆರೋಪ ಈಕೆ ಮೇಲಿದೆ. ಪ್ರಕರಣ ಬೆಳಕಿಗೆ ಬಂದು ಒಂದು ವರ್ಷ ಕಳೆದರೂ ಆರೋಪಿಯ ಬಂಧನವಾಗಿರಲಿಲ್ಲ. ಈ ಬಗ್ಗೆ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನೆನಗುದಿಗೆ ಬಿದ್ದಿತ್ತು.
ಇತ್ತೀಚೆಗೆ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ವೇಳೆ ಆರೋಪಿಯನ್ನು ಬಂಧಿಸದೆ ಕಾಲಹರಣ ಮಾಡುತ್ತಿರುವ ಪೊಲೀಸರ ನಡೆಗೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಬುಧವಾರ ಯಶಸ್ವಿನಿಯನ್ನು ಬಂಧಿಸಿದ್ದಾರೆ. ಕ್ರಿಮಿನಲ್ ಪ್ರಕರಣ ಇದಾಗಿದೆ. ಈಕೆ ಜೊತೆಗೆ ಎಸ್ಪಿ ಕಚೇರಿಯ ಆಡಳಿತಾಧಿಕಾರಿ ಹಾಗೂ ಕೋಶಾಧಿಕಾರಿ ಮೇಲೆಯೂ ಇದೇ ಆರೋಪ ಕೇಳಿಬಂದಿದೆ. ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ