ಬರಗೂರು :
ಬರಗೂರು ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾದ ಎಂಎಲ್‍ಸಿ ಚಿದಾನಂದ ಎಂ ಗೌಡ ಭೇಟಿ ನೀಡಿದ ಹದಿನೈದು ದಿನಗಳ ನಂತರ ಇದೇ ಶಾಲೆಗೆ ಎಂಜಿನಿಯರ್‍ಗಳು ಭೇಟಿ ನೀಡಿ, ಶಾಲಾ ಕಟ್ಟಡಗಳನ್ನು ನಿರ್ಮಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಶಿರಾ ತಾಲ್ಲೂಕು ಬರಗೂರಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ, 15 ದಿನಗಳ ಹಿಂದೆ ಎಂಎಲ್‍ಸಿ ಚಿದಾನಂದ ಎಂ ಗೌಡ ್ಲ ಭರವಸೆ ನೀಡಿದ್ದರು. ಪ್ರೌಢಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿದ್ದು, ಕೊಠಡಿಗಳ ಅವಶ್ಯಕತೆ ಇರುವುದನ್ನು ಗಮನಿಸಿದ್ದರು. ಇದನ್ನು ಮನಗಂಡ ಚಿದಾನಂದ್ ಎಂ.ಗೌಡ ಸರ್ಕಾರದ ಗಮನಕ್ಕೆ ತಂದು, ಶಾಲೆಗೆ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಲು ಕಾರ್ಯ ಯೋಜನೆಯನ್ನು ರೂಪಿಸಲು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರದ ಎಂಜಿನಿಯರ್ ಸೇರಿದಂತೆ ಕೆಲವು ಎಂಜಿನಿಯರ್‍ಗಳು ಭೇಟಿ ನೀಡಿ, ಶಾಲಾ ಮುಖ್ಯ ಶಿಕ್ಷಕರಲ್ಲಿ ಮಾಹಿತಿ ಸಂಗ್ರಹಿಸಿದರು. ನಿರ್ಮಿತಿ ಕೇಂದ್ರದ ಜಿಲ್ಲಾ ಮುಖ್ಯ ಎಂಜಿನಿಯರ್ ರಾಜಶೇಖರ್, ಜಿಲ್ಲಾ ವಿಭಾಗ ಎಂಜಿನಿಯರ್ ಪುಟ್ಟಲಿಂಗಯ್ಯ, ಎಂಜಿನಿಯರ್‍ಗಳಾದ ಅಶ್ವತ್ಥ್ ರೆಡ್ಡಿ, ಶ್ರೀನಿವಾಸ್, ರಂಗನಾಥ್, ಗೋಪಿಕುಂಟೆ ಸುಬ್ರಹ್ಮಣ್ಯ ಸ್ವಾಮಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಡಿ.ಮಾಲತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹೆಚ್.ಪುಟ್ಟತಾಯಮ್ಮ, ಶಾಲಾ ಸಹ ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ