ಜಾರ್ಖಂಡ್ :
ಗಣಿಯಲ್ಲಿ ಕಾರ್ಮಿಕರ ಮೇಲೆ ಮಣ್ಣು ಕುಸಿದು 6 ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್ನ ಕೊಡರ್ಮಾ ಜಿಲ್ಲೆಯ ಫುಲ್ವೇರಿಯಾ ಪ್ರದೇಶದಲ್ಲಿರುವ ಅಭ್ರಕದ ಗಣಿಯಲ್ಲಿ ನಡೆದಿದೆ.
ಈವರೆಗೆ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇತರರನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೋಡರ್ಮಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಹ್ತೇಶಮ್ ವಾಕ್ವಾರಿಬ್ ತಿಳಿಸಿದ್ದಾರೆ.
ಎಸ್‌ಪಿ ಪ್ರಕಾರ, ಕೊಡೆರ್ಮಾದ ಫುಲ್ವರಿಯಾ ಪ್ರದೇಶದಲ್ಲಿ ಗುರುವಾರ ಸಂಜೆ ಸುಮಾರು ಎಂಟು ಜನರು ಮೈಕಾ ಸ್ಕ್ರ್ಯಾಪ್‌ಗಳನ್ನು ಸಂಗ್ರಹಿಸುತ್ತಿದ್ದರು, ಗಣಿ ಮೇಲ್ಛಾವಣಿಯು ಕುಸಿದಿದೆ.
ಅವರ ಕೂಗು ಕೇಳಿ ಘಟನಾ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಅವರಲ್ಲಿ ಇಬ್ಬರನ್ನು ರಕ್ಷಿಸಿದ್ದಾರೆ, ಉಳಿದ 6 ಮಂದಿ ಎಲ್ಲಿದ್ದಾರೆ ಎಂದು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.ರಕ್ಷಿಸಲ್ಪಟ್ಟ ಇವರಿಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಹ್ತೇಶಮ್ ವಾಕ್ವಾರಿಬ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ