ತುರುವೇಕೆರೆ :
ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ತುರುವೇಕೆರೆ ತಾಲ್ಲೂಕು ಗ್ರಾಮ ಪಂಚಾಯಿತಿ ಅದ್ಯಕ್ಷರು ಹಾಗೂ ಉಪಾಧ್ಯಕ್ಷರ 30 ತಿಂಗಳ ಮೊದಲ ಅವಧಿಗೆ ಮೀಸಲಾತಿ ನಿಗದಿ ಪಡಿಸುವ ಸಭೆಯನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ತಾಲೂಕಿನ 27 ಗ್ರಾಮ ಪಂಚಾಯಿತಿ ಅದ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿಯನ್ನು ಜಿಲ್ಲಾಧಿಕಾರಿಗಳಿಂದ ಪ್ರಕಟಗೊಳಿಸಲಾಯಿತು.
ಮಧ್ಯಾನಃ 12 ಗಂಟೆಗೆಲ್ಲಾ ತಾಲ್ಲೂಕಿನ 27 ಗ್ರಾ.ಪಂ.ಪಟ್ಟಿಯನ್ನು ಲಾಟರಿ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪಟ್ಟಿಯನ್ನು ಜಿಲ್ಲಾಧಿಕಾರಿಗಳಾದ ರಾಕೇಶ್‍ಕುಮಾರ್ ಅವರು ಪ್ರಕಟಿಸಿದರು. ತಾಲ್ಲೂಕು ದಂಡಾಧಿಕಾರಿ ನಯೀಂಉನ್ನೀಸ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಲ್ಲೂಕಿನ ಎಲ್ಲಾ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದು ಅಧ್ಯಕ್ಷ-ಉಪಾಧ್ಯಕ್ಷರ ಕನಸು ಕಾಣುತ್ತಾ ಬಂದಿದ್ದ ಕೆಲ ಪಂಚಾಯಿತಿ ಸದಸ್ಯರುಗಳಿಗೆ ನಿರಾಶೆಯಾದರೆ ಮತ್ತೆ ಕೆಲವರು ನಗೆಮೊಗದಿಂದ ಸಭೆಯಿಂದ ಹೊರನಡೆದದ್ದು ಕಾಣಬಂತು. ಈಗಾಗಲೇ ತಾಲ್ಲೂಕಿನಲ್ಲಿ ಕುದುರೆ ವ್ಯಾಪಾರದ ಲಾಬಿ ನಡೆಯುತ್ತಿದ್ದು ಅಧ್ಯಕ್ಷ-ಉಪಾಧ್ಯಕ್ಷ ಪಟ್ಟ ಯಾರ ಮುಡಿಗೇರಲಿದೆ ಎಂಬುದನ್ನು ಆಯ್ಕೆ ಸಂಧರ್ಭದಲ್ಲಷ್ಟೆ ತಿಳಿಯಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ