ಹುಬ್ಬಳ್ಳಿ :
ಪ್ರಿವೆಡ್ಡಿಂಗ್ ಶೂಟ್ ಮಾಡುವಾಗ ಆಯತಪ್ಪಿ ನೀರಿಗೆ ಬಿದ್ದು ಮೂವರು ನೀರುಪಾಲಾಗಿರುವ ಘಟನೆ ನಗರದ ಕಿರೇಸೂರು ಗ್ರಾಮದ ಮಲಪ್ರಭಾ ಕಾಲುವೆಯಲ್ಲಿ ನಡೆದಿದೆ.
ನಾಲ್ವರು ಕಿರೇಸೂರ ಬಳಿಯ ಕಾಲುವೆಯ ಬಳಿಯಲ್ಲಿ ಪ್ರಿವೆಡ್ಡಿಂಗ್ ಶೂಟ್ ಗಾಗಿ ತೆರಳಿದ್ದರು. ಇದೇ ಸಮಯದಲ್ಲಿ ಜೇನು ನೊಣಗಳು ಬಂದ ಕಾರಣದಿಂದ ಭಯದಿಂದ ಎಲ್ಲರೂ ಓಡಿ ಹೋಗಿದ್ದು, ಅದರಲ್ಲಿ ಮೂರು ಯುವಕರು ನೀರಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಯುವಕರ ಅಜಾಗರೂಕತೆಯಿಂದಲೇ ದುರಂತ ಸಂಭವಿಸಿದೆ ಎನ್ನಲಾಗಿದೆ.
ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಬಳಿ 2 ಶವಗಳು ದೊರಕಿವೆ. ಮೃತರನ್ನು ಪೂನಾ ಮೂಲದ ಗಜಾನನ ರಾಜಶೇಖರ ಹಾಗೂ ಜೋಶಿ ಕ್ಲೆಮೆಂಟ್ ಜಂಗಮ ಎಂದು ಗುರುತ್ತಿಸಲಾಗಿದೆ ಮತ್ತೊರ್ವ ನಾಪತ್ತೆಯಾದ ಯುವಕ ಸನ್ನಿ ಎಂಬವನಿಗಾಗಿ ಹುಡುಕಾಟ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ