ಟಿ.ವಿ.ವಾಹಿನಿಗಳಲ್ಲಿ ಪ್ರಚೋದನಾಕಾರಿ ವರದಿ : ಕ್ರಮ ಜರುಗಿಸದ ಕೇಂದ್ರಕ್ಕೆ ತರಾಟೆ

ನವದೆಹಲಿ : 

     ಟಿ.ವಿ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಪ್ರಚೋದನಾಕಾರಿ ವರದಿಗಳ ಮತ್ತು ಕಾರ್ಯಕ್ರಮಗಳ ಕಡೆಗೆ ಕ್ರಮ ಜರುಗಿಸದ ಧೋರಣೆಗಾಗಿ ಕೇಂದ್ರ ಸರ್ಕಾರವನ್ನು ಸುಪ್ರಿಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

     ಸುದ್ದಿಗಳ ಮೇಲಿನ ನಿಯಂತ್ರಣವು ಕಾನೂನು ಪರಿಸ್ಥಿತಿ ನಿರ್ವಹಣೆಯ ಜೊತೆಗೆ ಅಗತ್ಯವಾದುದು ಕೂಡ. ಪ್ರಚೋದನಾಕಾರಿ ಕಾರ್ಯಕ್ರಮಗಳನ್ನು ತಡೆಯುವುದೂ ಸಹ ಅಗತ್ಯವಾದುದು ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿದೆ.

     ದೆಹಲಿಯಲ್ಲಿ ಜನವರಿ 26 ರಂದು ಹಲವೆಡೆ ಇಂಟರ್‍ನೆಟ್ ಸಂಪರ್ಕಕ್ಕೆ ನಿರ್ಬಂಧ ಹೇರಿದ್ದೂ ಸಹ ರ್ಯಾಲಿ ಹಿಂಸೆಗೆ ತಿರುಗಲು ಕಾರಣವಾಯಿತು ಎಂಬ ಅಂಶವನ್ನು ಉಲ್ಲೇಖಿಸಿರುವ ನ್ಯಾಯಾಲಯವು, ನ್ಯಾಯಯುತ ಹಾಗೂ ಫಲಪ್ರದವಾದ ಸುದ್ದಿ ಪ್ರಸಾರ ಇಂದಿನ ತುರ್ತು ಅಗತ್ಯವಿದೆ. ಆದರೆ ಪ್ರಚೋದನೆಯ ಉದ್ದೇಶ ಹೊಂದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎಂಬ ಮಾತನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ ಸೂಕ್ಷ್ಮವಾಗಿ ಕೇಂದ್ರವನ್ನು ಎಚ್ಚರಿಸಿದೆ.

      ಕೆಲವೊಂದು ಕಾರ್ಯಕ್ರಮಗಳು ಪ್ರಚೋದನಾಕಾರಿ ಆಗುತ್ತಿವೆ. ಈ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬಡೆ ನೇತೃತ್ವದ ಪೀಠವು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಮೆಹ್ತಾ ಅವರಿಗೆ ತಿಳಿಸಿದ್ದರು. ಕೋವಿಡ್ 19 ಆರಂಭದ ಸಂದರ್ಭದಲ್ಲಿ ತಬ್ಲಿಗ್ ಜಮಾತ್ ಕುರಿತ ವರದಿಗೆ ಸಂಬಂಧಿಸಿದ ಕೆಲ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಾಲಯ ಈ ನಿಲುವು ವ್ಯಕ್ತಪಡಿಸಿದೆ.

     ಕಾನೂನು ಮತ್ತು ಸುವ್ಯವಸ್ಥೆಯ ನಿಯಂತ್ರಣದ ದೃಷ್ಟಿಯಿಂದ ಸಮಾಜದಲ್ಲಿ ನ್ಯಾಯಯುತ ವರದಿಗಾರಿಕೆ ಅಗತ್ಯವಿದೆ ಹಾಗೂ ಕಡಿವಾಣದ ಅಗತ್ಯವೂ ಇದೆ ಎಂದು ಪೀಠ ಹೇಳಿದೆ. ಟಿ.ವಿ.ಯಲ್ಲಿ ಏನೆಲ್ಲಾ ಹೇಳುತ್ತಾರೆ ಎಂಬುದರ ಬಗ್ಗೆ ನಮಗೆ ಸಂಬಂಧವಿಲ್ಲ. ಆದರೆ ತನಿಖೆಯ ಪರಿಣಾಮವನ್ನು ಒಳಗೊಂಡ ವರದಿ ಮತ್ತು ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಈ ಮಾತುಗಳನ್ನು ಹೇಳಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link