ನವದೆಹಲಿ :
ಪ್ರತಿ ಬಾರಿಯೂ ಹಳೆಯ ಸಂಪ್ರದಾಯವನ್ನು ಮುರಿಯುವ ಮತ್ತು ಹೊಸ ಸಂಪ್ರದಾಯವನ್ನು ಆರಂಭಿಸುವ ನಡೆಯನ್ನು ನಿರ್ಮಲಾ ಅನುಸರಿಸಿಕೊಂಡು ಬಂದಿದ್ದು, ಈ ಬಾರಿ 73 ವರ್ಷಗಳ ‘ಬ್ರೀಫ್ ಕೇಸ್’ ಸಂಪ್ರದಾಯಕ್ಕೆ ತೆರೆ ಎಳೆದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅವರು ಬಜೆಟ್ ಪತ್ರಗಳನ್ನು ಒಳಗೊಂಡ ಬೃಹತ್ ಸೂಟ್‌ಕೇಸ್ ಹೊತ್ತು ತರುವ ಬದಲು, ರಾಷ್ಟ್ರೀಯ ಸಂಕೇತ ಅಶೋಕ ಸ್ತಂಬದ ಚಿತ್ರವುಳ್ಳ ಕೆಂಪು ಬಣ್ಣದ ‘ಬಹಿ ಖಾತಾ’ದ ಕಡತ ತಂದು ಅದರಲ್ಲಿ ಬಜೆಟ್ ಮಂಡಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ 73 ವರ್ಷಗಳ ಸಂಪ್ರದಾಯವೊಂದನ್ನು ಕೈಬಿಡಲಾಗಿದೆ.
Delhi: Finance Minister Nirmala Sitharaman will present and read out the #UnionBudget 2021-22 at the Parliament through a tab, instead of the traditional 'bahi khata'. pic.twitter.com/Ir5qZYz2gy
— ANI (@ANI) February 1, 2021
ಇದೇ ಪ್ರಥಮ ಸಲ ಕೇಂದ್ರ ಬಜೆಟ್ ಸಂಪೂರ್ಣ ಕಾಗದ ರಹಿತವಾಗುತ್ತಿದೆ. ಅಂದರೆ, 2021-22ನೇ ಸಾಲಿನ ಬಜೆಟ್ ಅನ್ನು ಕಾಗದಗಳಲ್ಲಿ ಮುದ್ರಣ ಮಾಡಿಲ್ಲ. ಮೇಡ್ ಇನ್ ಇಂಡಿಯಾ ಟ್ಯಾಬ್ಲೆಟ್ ಗ್ಯಾಡ್ಜೆಟ್‌ನಲ್ಲಿ ಸಂಪೂರ್ಣ ಬಜೆಟ್ ಪ್ರತಿಯನ್ನು ಅಡಕ ಮಾಡಲಾಗಿದೆ.
ಮೊಬೈಲ್ ಆಯಪ್ನಲ್ಲಿ ಬಜೆಟ್ ಪ್ರತಿ :
ಸಾರ್ವಜನಿಕರೂ ಯೂನಿಯನ್ ಬಜೆಟ್ ಮೊಬೈಲ್ ಆಪ್ ಮೂಲಕ ಬಜೆಟ್ ಪ್ರತಿಯನ್ನು ಪಡೆಯಬಹುದಾಗಿದೆ. ಆಪ್ನಲ್ಲಿ ಮುಂಗಡ ಪತ್ರದ 14 ದಾಖಲೆಗಳ ಪಿಡಿಎಫ್ ಪ್ರತಿ ಲಭ್ಯವಿರುತ್ತದೆ. ಇದರಲ್ಲಿ ಮುಂಗಡಪತ್ರದ ಭಾಷಣ ಮತ್ತು ಇತರೆ ದಾಖಲೆಗಳು ಸೇರಿಕೊಂಡಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಆಯಪ್ ಲಭ್ಯವಿದೆ. ಆಯಪ್ ಬಳಕೆದಾರ ಸ್ನೇಹಿಯಾಗಿದ್ದು, ಬಜೆಟ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು, ಝುೂಮ್ ಮಾಡಿ ನೋಡಬಹುದು ಮತ್ತು ಪ್ರಿಂಟ್ ಕೂಡ ಮಾಡಬಹುದಾಗಿದೆ. ಹುಡುಕುವುದಕ್ಕೆ ಸರ್ಚ್ ಆಯ್ಕೆಯನ್ನೂ ಒದಗಿಸಲಾಗಿದೆ. ಆಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಮಾದರಿಯಲ್ಲೂ ಲಭ್ಯವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
