ಹುಳಿಯಾರು :

ವಾಹನ ಮಾಲೀಕರು ಹಾಗೂ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಹುಳಿಯಾರು ಪೊಲೀಸ್ ಠಾಣೆಯ ಎಎಸ್ಐ ಆನಂದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದ ಆದೇಶದಂತೆ ಪ್ರತಿವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಒಂದು ತಿಂಗಳ ಕಾಲ ಆಚರಿಸಲಾಗುತ್ತದೆ. ರಸ್ತೆ ಸುರಕ್ಷತಾ ನಿಯಮಗಳು, ವಾಹನಗಳ ದಾಖಲೆಗಳು, ಸಂಚಾರಿ ನಿಯಮಗಳು, ರಸ್ತೆ ನಿಯಮಗಳ ಬಗ್ಗೆ ಚಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರಲ್ಲದೆ 18 ವರ್ಷ ತುಂಬಿರದೆ, ವಾಹನಗಳಿಗೆ ವಿಮೆ ಮಾಡಿಸದೆ, ಚಾಲನ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಅಪರಾದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಸಿ.ಬಿ.ಪರಮೇಶ್ವರಪ್ಪ ವಹಿಸಿದ್ದರು. ಆರಕ್ಷಕ ಸಿಬ್ಬಂದಿ ಶಂಕರ್, ಉಪನ್ಯಾಸಕರುಗಳಾದ ಬಿ.ಎಸ್.ಚಿದಾನಂದಪ್ಪ, ಎಚ್.ಎಸ್.ನಾರಾಯಣ್, ಸಿ.ಜಿ.ಶೈಲಜಾ, ಮಂಗಳಗೌರಮ್ಮ ಹಾಗೂ ಬಿ.ಶಿಲ್ಪ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








