ಮಧುಗಿರಿ : ಹೆಲ್ಮೆಟ್ ಧರಿಸದೆ ಸಾವು ಹೆಚ್ಚಳ

 ಕೊಡಿಗೇನಹಳ್ಳಿ : 

      ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸವಾರರು ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುತ್ತಿರುವುದು ಮುಖ್ಯ ಕಾರಣ. ಸವಾರ ರಸ್ತೆ ಸುರಕ್ಷತೆ ಬಗ್ಗೆ ಎಚ್ಚರ ವಹಿಸಿದರೆ ಹಲವರ ಪ್ರಾಣ ತಡೆಯಬಹುದು ಎಂದು ಪಿಎಸ್‍ಐ ಫಾಲಾಕ್ಷಪ್ರಭು ತಿಳಿಸಿದರು.

      ಅವರು ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಹಾಗೂ ಗ್ರಾಮದ ಸರ್ವೋದಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪದವಿ ಪೂರ್ವ ಕಾಲೇಜು, ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2021ರ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಹನ ಸವಾರರು ಕಡ್ಡಾಯ ಹೆಲ್ಮೆಟ್ ಜೊತೆಗೆ ಡ್ರೈವಿಂಗ್ ಲೈಸೆÀನ್ಸ್ ಮತ್ತು ಇನ್ಸುರೆನ್ಸ್ ಕಡ್ಡಾಯವಾಗಿ ಮಾಡಿಸಬೇಕು. ಹಾಗೆಯೆ 18 ವರ್ಷ ಒಳಗಿನ ಮಕ್ಕಳು ವಾಹನ ಚಾಲನೆ ಮಾಡಬಾರದು. ಯಾರಾದರೂ ವಾಹನ ಚಾಲನೆ ಮಾಡುವಾಗ ನಮಗೆ ದೊರತರೆ ಅಂತಹ ವಾಹನಗಳ ಮಾಲೀಕರ ಮೇಲೆ ದೂರು ದಾಖಲಿಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಮತ್ತು ವಿದ್ಯಾರ್ಥಿಗಳು ತಾವು ಸಹ ರಸ್ತೆ ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಎಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

      ಸರ್ವೋದಯ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ.ವಿ. ಸತ್ಯನಾರಾಯಣ, ನಿರ್ದೇಶಕ ರವಿಮೋಹನರೆಡ್ಡಿ, ಪ್ರೌಢಶಾಲೆÉಯ ಮುಖ್ಯ ಶಿಕ್ಷಕ ಪುಟ್ಟನರಸರೆಡ್ಡಿ, ಶಿಕ್ಷಕರಾದ ಸದಾಶಿವರೆಡ್ಡಿ, ರಾಜಗೋಪಾಲರೆಡ್ಡಿ, ಸುಮ, ನಳಿನ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap