ತಿಪಟೂರು ; ಬಸ್ ಅಭಾವ : ವಿದ್ಯಾರ್ಥಿಗಳ ಪರದಾಟ

 ತಿಪಟೂರು : 

      ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು, ಇದರಲ್ಲಿ ವಿದ್ಯಾರ್ಥಿಗಳಿಗೂ ತುಂಬಾ ತೊಂದರೆಯಾಗಿ ತಮ್ಮ ಭವಿಷ್ಯವೇನಾಗುತ್ತದೋ ಎಂಬ ಆತಂಕದಲ್ಲಿ ಮುಳುಗಿದ್ದ ಸಂದರ್ಭವೂ ಇತ್ತು. ಈಗ ಬಹುತೇಕ ಶಾಲಾ ಕಾಲೇಜುಗಳು ಆರಂಭವಾಗಿವೆ. ಆದರೆ ವಿದ್ಯಾರ್ಥಿಗಳು ಶಾಲೆಕಾಲೇಜಿಗೆ ಹೋಗಿಬರಲು ಬಸ್ ಇಲ್ಲದೇ ಪರಿತಪಿಸುವಂತಾಗಿದೆ.

      ತಿಪಟೂರಿಗೆ ಮತ್ತು ಮತ್ತಿರರ ಊರುಗಳಿಗೆ ತೆರಳುವ ವಿದ್ಯಾರ್ಥಿಗಳು ಕೊರೊನಾವನ್ನು ಮರೆತು ಆಗೊಂದು ಈಗೊಂದು ಬರುವ ಬಸ್‍ಗಳನ್ನು ಕಾಯ್ದುಕುಳಿತು, ಕಿಕ್ಕಿರಿದು ತುಂಬಿರುವ ಬಸ್‍ಗಳಲ್ಲಿ ಹತ್ತಿ ಶಾಲಾ-ಕಾಲೇಜಿಗೆ ಬರುವಷ್ಟರಲ್ಲಿಯೇ ವಿದ್ಯಾರ್ಥಿಗಳು ಸುಸ್ತಾಗಿರುತ್ತಾರೆ. ಇನ್ನು ಪಾಠವನ್ನು ಕೇಳುವ ಪರಿಸ್ಥಿತಿಯಲ್ಲಿಯೇ ಇರುವುದಿಲ್ಲ. ಆದ್ದರಿಂದ ಶೀಘ್ರವಾಗಿ ವಿದ್ಯಾರ್ಥಿಗಳಿಗೆ ಬಸ್‍ವ್ಯವಸ್ಥೆಯನ್ನು ಮಾಡಿಕೊಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ರಂಗಾಪುರದಲ್ಲಿ ಬಸ್ ತಡೆ :

      ತಾಲ್ಲೂಕಿನ ಪ್ರಮುಖ ಯಾತ್ರಸ್ಥಳವಾದ ರಂಗಾಪುರದಲ್ಲಿ ಗುರುವಾರ ಬಸ್‍ಗಳನ್ನು ನಿಲ್ಲಿಸುವುದಿಲ್ಲವೆಂದು ಬಸ್‍ತಡೆದ ಘಟನೆ ನಡೆದಿದೆ. ಇಲ್ಲಿ ಇನ್ನೊಂದು ಮುಖ್ಯ ಕಾರಣವೆಂದರೆ ರಂಗಾಪುರಕ್ಕೆ ಬಸ್ ಬರುವ ಬಸ್ ನಿಲ್ಲಿಸಿದರೂ ಹತ್ತಲು ಸ್ಥಳವಿಲ್ಲದಷ್ಟು ಪ್ರಯಾಣಿಕರು ಬಸ್ಸಿನಲ್ಲಿ ಕಿಕ್ಕಿರಿದು ತುಂಬಿರುತ್ತಾರೆ. ಆದ್ದರಿಂದ ಬಸ್ ನಿಲ್ಲಿಸಲು ಸಾಧ್ಯವಾಗುವುದಿಲ್ಲವೆಂದು ಕೆಲವರು ತಿಳಿಸಿದರೆ, ನಮ್ಮ ಊರಿನಲ್ಲಿ ಬಸ್ ಸಂಚರಿಸಿದರೂ ಸಹ ವಿದ್ಯಾರ್ಥಿಗಳು ಹತ್ತಲಾಗುವುದಿಲ್ಲವೆಂಬ ನೋವು ನಮಗಿದೆ ಎಂದು ಕೆಲವರು ತಿಳಿಸುತ್ತಾರೆ. ಹೀಗೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸೂಕ್ತ ಬಸ್‍ಗಳಿಲ್ಲದೆ ಎಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರಲಾಗುತ್ತಿಲ್ಲ. ಬೇಡಿಕೆ ಇರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸಂಚಾರ ಆರಂಭಿಸಬೇಕು ಎಂಬುದು ಜನರ ಒತ್ತಾಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link