ಮಂಗಳೂರು :

ಕಿರಿಯ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡಿದ್ದರಿಂದಾಗಿ ಕೇರಳ ಮೂಲಕ 11 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿರುವಂತ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ದೇರಳಕಟ್ಟೆಯ ಕಣಚೂರು ಫಿಸಿಯೋಥರಪಿ ಮತ್ತು ನರ್ಸಿಂಗ್ ಕಾಲೇಜಿನಲ್ಲಿ ಜೂನಿಯರ್ ಗಳಿಗೆ ಸೀನಿಯರ್ ಸ್ಟೂಡೆಂಟ್ಸ್ ರ್ಯಾಗಿಂಗ್ ಮಾಡಿದ್ದರಂತೆ. ಇಂತಹ ವಿಚಾರವನ್ನು ಜೂನಿಯರ್ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಬಂಧಿತ ಆರೋಪಿಗಳು ಜೂನಿಯರ್ ವಿದ್ಯಾರ್ಥಿಗಳನ್ನು ಶೇವಿಂಗ್, ಕಟ್ಟಿಂಗ್ ಮಾಡಿಸಬೇಕು, ಬೆಂಕಿ ಪೊಟ್ಟಣ ಕಡ್ಡಿ ಎಣಿಸಬೇಕು, ಬೆಂಕಿ ಕಡ್ಡಿಯಿಂದ ರೂಮನ್ನು ಅಳೆಯಬೇಕು ಎಂಬಿತ್ಯಾದಿ ಮಾಡಿದ್ದಲ್ಲದೆ, ವಿರೋಧ ಮಾಡಿದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಈ ವಿಷಯ ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಇದರಿಂದ ನೊಂದ ಐವರು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಅವರ ನಿರ್ದೇಶನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 18 ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿತ್ತು.
ದೂರು ಸ್ವೀಕರಿಸಿದ್ದಂತ ಪೊಲೀಸರು ಕೇರಳ ಮೂಲದ 11 ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಬಂಧಿತ ವಿದ್ಯಾರ್ಥಿಗಳನ್ನು ಮಹ್ಮದ್ ಶಮ್ಮಸ್, ರಾಬಿನ್ ಬಿಜು, ಆಲ್ವಿನ್, ಜಾಬಿನ್, ಸಿರಿಲ್, ರಾಯ್ಚನ್, ಮಹ್ಮದ್ ಸೂರಜ್, ಅಶಿನ್ ಬಾಬು, ಅಬ್ದುಲ್ ಬಾಸಿತ್, ಅಬ್ದುಲ್ ಅನಾಸ್ ಮತ್ತು ಅಕ್ಷಯ್ ಎಂದು ಗುರುತಿಸಲಾಗಿದೆ.
ಕಾಲೇಜಿನಲ್ಲಿ ರ್ಯಾಗಿಂಗ್ ನಡೆಯುತ್ತಿದ್ದರೆ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಕಮಿಷನರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








