ಕುಣಿಗಲ್ : ಹೆಚ್ಚಾದ ಪೆಟ್ರೋಲ್, ಟೈರ್ ಕಳವು : ಜನರಲ್ಲಿ ಆತಂಕ!!

 ಕುಣಿಗಲ್ : 

      ಪಟ್ಟಣದಲ್ಲಿ ದ್ವಿಚಕ್ರ ವಾಹನಗಳ ಪೆಟ್ರೋಲ್ ಕದಿಯುವುದು ಹಾಗೂ ಆಟೋ ರಿಕ್ಷಗಳ ಟೈರ್ ಬಿಚ್ಚುವುದು ವಿವಿಧ ವಾಹನಗಳ ಬ್ಯಾಟರಿ ಕಳ್ಳತವಾಗುತ್ತಿರುವ ಪ್ರಕರಣ ಹೆಚ್ಚಾಗಿ ನಾಗರಿಕರಲ್ಲಿ ಆತಂಕಮೂಡಿಸಿದೆ.

      ಕೆಲ ತಿಂಗಳಿಂದ ಪಟ್ಟಣದಲ್ಲಿ ಪ್ರತಿಷ್ಠಿತರೇ ವಾಸಿಸುವ ಹೌಸಿಂಗ್ ಬೋರ್ಡ್, ವಿದ್ಯಾನಗರ, ಅಗ್ರಹಾರ, ಅಂದಾನಯ್ಯ ಬಡಾವಣೆಯಲ್ಲಿ ರಾತ್ರಿ ವೇಳೆ ಮನೆ ಮುಂದೆ ನಿಂತಿದ್ದ ವಾಹನಗಳಲ್ಲಿ ಪೆಟ್ರೋಲ್ ಕದಿಯುವವರ ಹಾವಳಿ ಹೆಚ್ಚಾಗುತ್ತಿದೆ, ಅದೇ ರೀತಿ ಬ್ಯಾಟರಿ, ಆಟೋ ರಿಕ್ಷಾಗಳ ಹೊಸ ಟೈರ್‍ಗಳನ್ನು ಕದಿಯಲಾಗುತ್ತಿದೆ.

      ಶನಿವಾರ ಮುಂಜಾನೆ ತುರ್ತಾಗಿ ಸರ್ಕಾರಿ ನೌಕರ ಮಲ್ಲಿಕಾರ್ಜುನ್ ಎಂಬುವವರು ತಮ್ಮ ಮೊಮ್ಮಗನೊಂದಿಗೆ ಪೇಟೆಗೆ ಔಷಧಿ ತರಲು ಬೈಕ್ ಸ್ಟಾಟ್ ಮಾಡುತ್ತಾರೆ, ಅದರಲ್ಲಿ ಪೆಟ್ರೋಲ್ ಪೈಪ್ ಕಿತ್ತು ಹಾಕಿ ಟ್ಯಾಂಕ್‍ನಲ್ಲಿದ್ದ ಸಂಪೂರ್ಣ ಪೆಟ್ರೋಲ್ ಕದ್ದು ಹೊಯ್ದಿದ್ದಾರೆ. ತುರ್ತಾಗಿ ತರಾತುರಿಯಲ್ಲಿ ಬೈಕ್ ಏರಿ ಸ್ಟಾಟ್ ಮಾಡುತ್ತಾರೆ ಸ್ಟಾಟ್ ಆಗದೇ ಹೋದಾಗ ತಾತಾ ಮೊಮ್ಮಗ ಹಿಡಿಶಾಪ ಹಾಕುತ್ತಾ ಅಯ್ಯೋ ಸಾರ್ ನಿನ್ನೆ ಹಾಕ್ಸಿದ್ದೆ ಟ್ಯಾಂಕ್ ಪುಲ್ ಆದ್ರೆ ನೋಡ್ರಿ ಇಲ್ವೇ ಇಲ್ಲಾ ಎಂದು ಪ್ರಜಾಪ್ರಗತಿ ವಿತರಿಸಲು ಮುಂಜಾನೆ ಹೋದಾಗ ದೂರು ಹೇಳುತ್ತಾರೆ.

ಅದೇ ರೀತಿ ಕೆಲ ತಿಂಗಳಿಂದ ಒಂದೇ ಆಟೋ ರಿಕ್ಷಾದಲ್ಲಿ ಸುಮಾರು ಎರಡು ಮೂರು ತಿಂಗಳಿಂದ ಮೂರು ಬಾರಿ ಕಳ್ಳತನವಾಗಿದೆ. ಅದೇ ರೀ ಗುತ್ತಿಗೆದಾರೊಬ್ಬರು ಆಯುಧ ಪೂಜೆ ಹಿಂದಿನ ದಿನ ಮನೆಯ ಮುಂದೆ ನಿಲ್ಲಿಸಿದ್ದ ಆದರೆ ಮುಂಜಾನೆ ಪೂಜೆ ಮಾಡಲು ಅಣಿಯಾಗುತ್ತಾರೆ ಆದರೆ ಕಾರು, ಜೆಸಿಬಿ, ಇತರೆ ವಾಹನಗಳ ಹೊಸ ಬ್ಯಾಟರಿ, ಡಿಸೆಲ್, ಸ್ಟ್ರಾಟರ್ ಸೇರಿದಂತೆ ಕಳ್ಳತನವಾಗಿತ್ತು.
ಪೊಲೀಸರು ಈ ಕಳ್ಳರ ಪತ್ತೆ ಮಾಡಿ, ಕಳವು ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ನಾಗರೀಕರು ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap