ಅಂಗನವಾಡಿ ಸಂಸ್ಕಾರ ಕಲಿಸುವ ಕೇಂದ್ರವಾಗಲಿ

 ತಿಪಟೂರು : 

      ಮನೆಯೇ ಮೊದಲ ಪಾಠಶಾಲೆ, ಅಂಗನವಾಡಿ ಮೊದಲ ಗುರುಕುಲದಂತೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಕೆಲಸವಾಗಬೇಕೆಂದರು ಶಾಸಕ ಬಿ.ಸಿ.ನಾಗೇಶ್ ಕರೆನೀಡಿದರು.

      ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ದೊಡ್ಡಿಕಟ್ಟೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಒಗ್ಗೂಡಿಸುವಿಕೆ ಯೋಜನೆಯಡಿ ಅಂದಾಜು ಮೊತ್ತ ರೂ 8.00 ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಮಗುವಿಗೆ ತಾಯಿಯೇ ಮೊದಲು ಗುರುವಾಗಿದ್ದು ಈಗಲೂ ಮುಂದವರೆಯುತ್ತಿದೆ. ಈಗ ಮಕ್ಕಳು ಅಂಗನವಾಡಿಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಜೊತಗೆ ಮಕ್ಕಳಿಗೆ ದೇಶಭಕ್ತರು, ಸಂತರು, ಮಹನೀಯರ ಕಥೆಗಳನ್ನು ತಿಳಿಸುವ ಮೂಲಕ ಅವರಿಗೆ ಉತ್ತಮವಾದ ಸಂಸ್ಕಾರವನ್ನು ಕಲಿಸುವ ಕೆಲಸವನ್ನು ಅಂಗನವಾಡಿಯಲ್ಲಿ ಕಲಿಸಬೇಕು. ಮಕ್ಕಳು ಎಲ್ಲವನ್ನು ಗ್ರಹಿಸುತ್ತಿರುತ್ತವೆ ಜೊತೆಗೆ ನಾವು ಏನು ಮಾಡುತ್ತೇವೋ ಅದನ್ನೇ ಅನುಕರಿಸುತ್ತವೆ. ಆದದ್ದರಿಂದ ಹಿರಿಯರು ಹೇಳುತ್ತಿದ್ದರು ಮಕ್ಕಳಬುಂದೆ ಜಗಳವಾಡಬಾರದು ಏಕೆಂದರೆ ಅವು ನಮ್ಮನ್ನೇ ನೋಡುತ್ತಿರುವುದರಿಂದ ಮುಗ್ಧ ಮನಸ್ಸಿನ ಮೇಲೆ ಹೆಚ್ಚು ಪ್ರಭಾವಿತರಾಗಿ ಅದನ್ನೇ ಅನುಸರಿಸುತ್ತವೆ ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲ್ಕುರಿಕೆ ಗಾ.ಪಂ ಅಧ್ಯಕ್ಷ ಉಮಾಮಹೇಶ್ ವಹಿಸಿದ್ದರು. ಗ್ರಾ. ಪಂ ಸದಸ್ಯ ಜಗದೀಶ್, ಗ್ರಾ.ಪಂ ಮಾಜಿ ಸದಸ್ಯ ಶ್ರೀನಿವಾಸ್ ಮತ್ತು ಯಶೋದಮ್ಮ, ಸಿ.ಡಿ.ಪಿ.ಓ ಪಿ ಓಂಕಾರಪ್ಪ, ಇಲಾಖೆಯ ಮೇಲ್ವಿಚಾರಕಿ ವತ್ಸಲಾ.ಬಿ.ಪಗಡಿ, ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ ಮತ್ತು ಶಿವಮ್ಮ, ಮಕ್ಕಳ ತಾಯಂದಿರು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link