ಮಧುಗಿರಿ : ಯುವಕನ ಕೊಲೆಗೈದಿದ್ದ ಆರೋಪಿಗಳ ಬಂಧನ

 ಮಧುಗಿರಿ : 

      ಮಾ.12 ರಂದು ಯುವಕನೊಬ್ಬನನ್ನು ಹಾಡು ಹಗಲೆ ಚಾಕು ಹಾಗೂ ಮತ್ತಿತರರ ಆಯುಧಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಘಟನೆ ನಡೆದ 48 ಘಂಟೆಯೊಳಗೆ ಮಧುಗಿರಿ ಪೋಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

      ತುಮಕೂರಿನ ಮಂಜುನಾಥ ನಗರದ ವಾಸಿ ವೀರಭದ್ರಸ್ವಾಮಿ (26) ಕೊಲೆಯಾದ ದುರ್ದೈವಿಯಾಗಿದ್ದಾನೆ. ಕೃತ್ಯದಲ್ಲಿ ಭಾಗಿಯಾಗಿದ್ದ ಗುರುಕಿರಣ್ (19), ಧನಂಜಯ್ (19), ಮಧುಗೌಡ (20) ಎಂಬ ಯುವಕರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೋಲೀಸರು ಕ್ರಮ ಕೈಗೊಂಡಿದ್ದಾರೆ.

ಪಿಎಸ್‍ಐ ಮಂಗಳಗೌರಮ್ಮ, ಎಎಸ್‍ಐ ರಾಮಾಂಜಿನಪ್ಪ, ಮುಖ್ಯಪೇದೆಗಳಾದ ರಂಗನಾಥ, ವಿನೋದ್, ಪೇದೆಗಳಾದ ನಟರಾಜು, ರಾಘವೇಂದ್ರ ಸ್ವಾಮಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕರು ತಮ್ಮ ಭವಿಷ್ಯದ ಹಿತ ದೃಷ್ಟಿಯಿಂದ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರ ವಿರುವಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸೂಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link