‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾಷಾ ಕಲಿಕೆಗೆ ವಿಶೇಷ ಒತ್ತು’ : ಶಿಕ್ಷಣ ಸಚಿವ

 ತುಮಕೂರು : 

     ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾಷಾ ಕಲಿಕೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು ತಿಳಿಸಿದರು.

      ಶ್ರೀ ಸಿದ್ಧಗಂಗಾ ಮಠ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ, ಕರ್ನಾಟಕ ಸಂಸ್ಕøತ ಕಾಲೇಜು ಬೋಧಕ ಮತ್ತು ಬೋಧಕೇತರ ಸಂಘ, ಬೆಂಗಳೂರು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ವೇದ ಸಂಸ್ಕøತ ಮಹಾವಿದ್ಯಾಲಯದ ಸಂಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ‘ರಾಷ್ಟ್ರಸ್ತರದ ಸಂಗೋಷ್ಠಿ, ಶಾಸ್ತ್ರಕಾವ್ಯಕಲಾದರ್ಶನಂ ಮಹಾಭಾರತಮ್’ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

      ನಾಡಿನ ಹಿರಿಮೆಯ ಶ್ರೇಷ್ಠ ಭಾಷೆ ಸಂಸ್ಕøತವನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಉಳಿದೆಲ್ಲಾ ಭಾಷೆಗಳಿಗೂ ಪರಿವೀಕ್ಷಕರಿರುವಂತೆ ಸಂಸ್ಕøತ ಭಾಷೆಗೂ ಪರಿವೀಕ್ಷಕರನ್ನು ನೇಮಕ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

      ದೇಶದ ಇತಿಹಾಸ, ಪುರಾಣಗಳ ಅಧ್ಯಯನಕ್ಕೆ ಸಂಸ್ಕøತ ಪೂರಕವಾದ ಭಾಷೆಯಾಗಿದೆ. ಸಂಸ್ಕøತ ಭಾಷೆ ಕಲಿಯುವುದರಿಂದ ನಾಡಿನ ಶ್ರೀಮಂತಿಕೆ ಹಿಮ್ಮಡಿಯಾಗುತ್ತದೆ. ಜಗತ್ತಿನ ಬಹತೇಕ ಎಲ್ಲಾ ಭಾಷೆಗಳಿಗಿಂತ ಸಂಸ್ಕøತ ಭಾಷೆಗೆ ವಿಶೇಷ ಸ್ಥಾನಮಾನವಿದೆ. ಮಧುರ ಮತ್ತು ದಿವ್ಯವಾದ ಭಾಷೆಯಾಗಿರುವ ಸಂಸ್ಕøತ ಮತ್ತು ಸಂಸ್ಕøತಿ ನಾಡಿನ ಶ್ರೇಷ್ಠ ರತ್ನಗಳಾಗಿವೆ. ಹಲವು ಭಾಷೆಗಳ ನಡುವೆಯೂ ಸಂಸ್ಕøತ ಭಾಷೆ ತನ್ನ ಗಟ್ಟಿತನದಿಂದ ಉಳಿದುಕೊಂಡಿದ್ದು, ಈ ಭಾಷೆಯ ಮೌಲ್ಯವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.
ಪ್ರಗತಿಪರ ಚಿಂತನೆಯುಳ್ಳ ಶ್ರೀ ಸಿದ್ಧಗಂಗಾ ಮಠ ಸಂಸ್ಕøತ ಭಾಷೆಯನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಲಿಂ.ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಹಾಕಿದ ಸಂಸ್ಕøತದ ಅಡಿಪಾಯ ಗಟ್ಟಿಯಾಗಿ ಮಠದ ವಿದ್ಯಾಸಂಸ್ಥೆಗಳಲ್ಲಿ ನೆಲೆಯೂರಿದೆ ಎಂದರು.

      ಸಂಸ್ಕøತ ಭಾಷೆ ಉಳಿವಿಗಾಗಿ ಸಾಕಷ್ಟು ವರ್ಷಗಳಿಂದ ನಿರಂತರ ಶ್ರಮ ಸಾಗುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಕøತ ಕಾಲೇಜು ಬೋಧಕ ಮತ್ತು ಬೋಧಕೇತರ ಸಂಘವು ಭಾಷೆಯ ಉಳಿವಿಗಾಗಿ ರಾಷ್ಟ್ರೀಯ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಕøತಿ ಮತ್ತು ಸಂಸ್ಕøತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಹೆಚ್ಚಾಗಬೇಕು ಎಂದು ತಿಳಿಸಿದರು.

      ಸಂಸ್ರ್ಕತ ಭಾಷೆಯಲ್ಲಿನ ಅಗಾಧವಾದ ಜ್ಞಾನ, ಆಳ-ಅಗಲ ತಿಳಿಯುವದೇ ಒಂದು ದೊಡ್ಡ ಕಾರ್ಯ. ವೇದ, ವ್ಯಾಕರಣ, ತತ್ವ, ಜ್ಯೋತಿಷ್ಯ ಮೊದಲಾದ ಶಾಸ್ತ್ರ ಸಂಪ್ರದಾಯಗಳು ಇದರಲ್ಲಿದ್ದು, ಸಂಸ್ಕøತ ಉಳಿದರೆ ನಮ್ಮ ಸಂಸ್ಕøತಿ ಉಳಿಯುತ್ತದೆ. ಪ್ರೀತಿಯಿಂದ ಕಲಿತರೆ ಸಂಸ್ಕøತ ಭಾಷೆಯನ್ನು ಕರಗತ ಮಾಡಿಕೊಳ್ಳಬಹುದು ಎಂದರು.

      ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದರು. ಬೆಂಗಳೂರು ಕರ್ನಾಟಕ ಸಂಸ್ಕøತಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಇ. ದೇವನಾಥನ್, ಉನ್ನತ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಆಚಾರ್ಯ ಟಿ.ಎನ್.ಪ್ರಭಾಕರ, ಸಂಸ್ಕ್ರತ ಕಾಲೇಜು ಬೋಧಕ ಮತ್ತು ಬೋಧಕೇತರ ಸಂಘದ ಅಧ್ಯಕ್ಷ ಡಾ. ನಾಗೇಂದ್ರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಲ್ಲಿ ಹೆಜ್ಜೆಯನ್ನಿಡಲಾಗುವುದು: ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಠಿಯನ್ನಿಟ್ಟುಕೊಂಡು ನೀತಿ-ನಿರ್ಧಾರಗಳ ಬಗ್ಗೆ ಜಾಗರೂಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ 6-12ನೇ ತರಗತಿಗಳು ನಡೆಯುತ್ತಿದ್ದು, 1-5ನೇ ತರಗತಿಗಳನ್ನು ಪ್ರಾರಂಭಿಸಿಲ್ಲ. ಹಾಗಾಗಿ 1-5ನೇ ತರಗತಿಗಳಿಗೆ ಚಂದನ, ಆಕಾಶವಾಣಿ ಮೂಲಕ ತರಗತಿಗಳನ್ನು ನಡೆಸುವ ಪರ್ಯಾಯ ವ್ಯವಸ್ಥೆಯೊಂದಿಗೆ ಶಿಕ್ಷಣ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap