ತುಮಕೂರು :
ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಮೂಲಕ ಆರೋಗ್ಯ, ಶಿಕ್ಷಣ, ಆಸರೆ, ಆಧ್ಯಾತ್ಮ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದು, ಆಶ್ರಮದ ಸೇವೆ ಮೆಚ್ಚಿ ಪ್ರಧಾನಿ ನರೇಂದ್ರ ಮೋದಿಯವರು ಸಂದೇಶ ಪತ್ರ ಕಳುಹಿಸಿರುವುದು ಸೇವೆ ಮಾಡಲು ಮತ್ತಷ್ಟು ನೈತಿಕ ಬಲ ಹೆಚ್ಚಿಸಿದೆ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ, ಸ್ವಾಮೀ ವಿವೇಕಾನಂದ ಗ್ರಾಮೀಣ ಆರೋಗ್ಯ ಕೇಂದ್ರ ಹಾಗೂ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದವತಿಯಿಂದ ಕೇಂದ್ರದ ಸುತ್ತಮುತ್ತಲ 500 ಹಳ್ಳಿಗಳಲ್ಲಿ 27 ಯೋಜನೆಗಳನ್ನು ಹಮ್ಮಿ ಕೊಂಡಿದ್ದು,ಆನ್‍ಲೈನ್ ತರಗತಿಗಳಿಂದ ವಂಚಿತರಾಗುತ್ತಿದ್ದ ಗಡಿನಾಡಿನ ಮಕ್ಕಳನ್ನು ಗಮನದಲ್ಲಿಸಿಕೊಂಡು ದೂರ ತರಂಗ ಶಿಕ್ಷಣ ಮತ್ತು ಕೌಶಲ್ಯ ನೈಪುಣ್ಯ ಯೋಜನೆ ಜಾರಿಗೆ ತರಲಾಗಿದೆ. ಎಂದರು.
ದೂರ ತರಂಗ ಶಿಕ್ಷಣ ಯೋಜನೆಯಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೇರಿದ ಮಧುಗಿರಿ, ಪಾವಗಡ, ಶಿರಾ ಮತ್ತು ಕೊರಟಗೆರೆ ತಾಲೂಕುಗಳ ಸುಮಾರು 40 ಕುಗ್ಗ್ರಾಮ ಮತ್ತು ಗಡಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ದೃಶ್ಯ ಮತ್ತು ಶ್ರಮದ ಅತ್ಯಾಧುನಿಕ ಯಂತ್ರೋಪಕರಣ, ಡಿಜಿಟಲ್ ಟಚ್‍ಬೋರ್ಡ್ ಮೂಲಕ ಎಲ್ಲಾ ವಿಷಯಗಳ ಬೋಧನೆ ದೊರೆಯುವಂತೆ ಮಾಡಲಾಗುತ್ತಿದೆ. 7ನೇ ತರಗತಿಯಿಂದ 10 ನೇ ತರಗತಿಯವರೆಗಿನ ಸುಮಾರು 15 ಸಾವಿರ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆಂದರು.
ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಕೋರಿಕೆಯ ಮೇರೆಗೆ ದೂರತರಂಗ ಶಿಕ್ಷಣ ಯೋಜನೆಯ ಡಿಸ್‍ಪ್ಲೇ ಯೂನಿಟ್ ಅನ್ನು ತುಮಕೂರಿನ ರೆಡ್‍ಕ್ರಾಸ್ ನವರು ನಡೆಸುತ್ತಿರುವ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳೆ ಶಾಲೆಗೆ ನೀಡಲಾಗುತ್ತಿದೆ.ಇಷ್ಟು ಯೋಜನೆಯನ್ನು ಇನ್‍ಪೋಸಿಸ್‍ನ ಸಂಸ್ಥೆಯ ಸಹಕಾರದೊಂದಿಗೆ ಅನುಷ್ಠಾನಗೊಳಿಸುತಿದ್ದು, ಇದರ ನಿರ್ವಹಣೆಯನ್ನು ಇನ್‍ಪೋಸಿಸ್ ಸಂಸ್ಥೆಯ ಸಮರ್ಪಣಾ ಸೇವಾ ಸಂಸ್ಥೆ ಮಾಡುತ್ತಿದೆ ಎಂದರು. ಅತ್ಯಂತ ಬರದ ಪ್ರದೇಶವಾಗಿರುವ ಪಾವಗಡ ತಾಲೂಕಿನ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ತಾಲೂಕಿನಲ್ಲಿ 11 ಶುದ್ದ ಕುಡಿಯುವ ನೀರಿನ ಘಟಕ ಮತ್ತು ತುಮಕೂರು ನಗರದ ಸರಕಾರಿ ಜೂನಿಯರ್ ಒಂದು ಘಟಕವನ್ನು ಸ್ಥಾಪಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ವ್ಯವಸ್ಥಾಪಕ ನಾಗರಾಜು ಉಪಸ್ಥಿತರಿದ್ದರು.
ಪಾವಗಡವನ್ನು ಕುಷ್ಠರೋಗ ಮುಕ್ತ ತಾಲೂಕಾಗಿಸಲು ಪಣ :
ಆಶ್ರಮದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದಿಂದ ಕ್ಷಯ, ಕುಷ್ಠ, ಹೆಚ್.ಐ.ವಿ ಪೀಡಿತರು ಸೇರಿದಂತೆ ಹಲವು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದು, ಇದುವರೆಗೆ ಕಣ್ಣಾಸ್ಪತ್ರೆಯಲ್ಲಿ 6,39,739 ಜನರ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರೆ, ಒಳರೋಗಿಗಳಾಗಿ 1,39,957 ಜನರು ಚಿಕಿತ್ಸೆ ಪಡೆದಿದ್ದಾರೆ. ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯಿಂದ 13 ಸಾವಿರಕ್ಕೂ ಹೆಚ್ಚಿನ ಚಿಕ್ಕಮಕ್ಕಳಿಗೆ ಕಣ್ಣಿನ ಅಪರೇಷನ್ ಮಾಡಲಾಗಿದೆ. ಪಾವಗಡ ತಾಲೂಕನ್ನು ಕುಷ್ಟರೋಗ ಮುಕ್ತ ತಾಲೂಕು ಮಾಡಬೇಕೆಂಬ ಗುರಿಯೊಂದಿಗೆ 3859 ಮಂದಿ ಕುಷ್ಠರೋಗಿಗಳನ್ನು ದಾಖಲಿಸಿಕೊಂಡು 3720 ಮಂದಿಯನ್ನು ಕುಷ್ಠರೋಗದಿಂದ ಅಪರೂಪದ ಸರ್ಜರಿ ಮೂಲಕ ಗುಣಮುಖರಾಗಿಸಿದ್ದು ಉಳಿಗೆ 550 ಮಂದಿಗಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸದಾಗಿ ಮಿಂಟೋ ಕಣ್ಣಿನ ಆಸ್ಪತ್ರೆಯ ಸಹಕಾರದೊಂದಿಗೆ ಸುಸಜ್ಜಿತ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸುತಿದ್ದು, ಸದ್ಯದಲ್ಲಿಯೇ ರೋಗಿಗಳ ಸೇವೆಗೆ ಲಭ್ಯವಾಗಲಿದೆ ಎಂದು ಶ್ರೀಜಪಾನಂದ ಸ್ವಾಮೀಜಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ