ತುಮಕೂರು :
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹೊಂಬಾಳೆ ಕ್ರಿಯೇಷನ್ಸ್ ನಿರ್ಮಿಸಿರುವ ತಾವೂ ನಾಯಕನಟಾಗಿ ಅಭಿನಯಿಸಿರುವ ‘ಯುವರತ್ನ’ ಚಿತ್ರದ ಪ್ರಮೋಷನ್ಗಾಗಿ ಸೋಮವಾರ ಸಂಜೆ ತುಮಕೂರಿಗೆ ಆಗಮಿಸಿದರು.
ಬಳ್ಳಾರಿ, ಹಿರಿಯೂರು, ಶಿರಾದಲ್ಲಿ ಪ್ರಚಾರ ಮುಗಿಸಿ ತುಮಕೂರು ನಗರದ ಎಸ್ಐಟಿ ಕ್ರೀಡಾಂಗಣಕ್ಕೆ ಆಗಮಿಸಿದ ಪುನೀತ್ ಅವರನ್ನು ಕಾಣಲು ಅಭಿಮಾನಿಗಳ ದಂಡೇ ನೆರೆದಿತ್ತು. ತಮ್ಮ ನೆಚ್ಚಿನ ನಟನನ್ನು ಕಂಡು ಜೈಕಾರ ಕೂಗಿ ಶಿಳ್ಳೆ ಹೊಡೆದ ಅಭಿಮಾನಿಗಳು ಫೋಟೋ ತೆಗೆಯಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಲಲು ಮುಗಿ ಬಿದ್ದಿದ್ದರು. ಇದಾದ ಬಳಿಕ ಸಿದ್ಧಗಂಗಾ ಮಠಕ್ಕೆ ತೆರಳಿದ ಪುನೀತ್ ರಾಜ್ಕುಮಾರ್ ಲಿಂಗೈಕ್ಯ ಶ್ರೀಗಳ ಗದ್ದುಗೆ ದರ್ಶನ ಪಡೆದು, ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ನೂತನ ಚಿತ್ರ, ಪುನೀತ್ರಾಜ್ಕುಮಾರ್ ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.
ತಮ್ಮ ಭಾಷಣದಲ್ಲಿ ಸಿದ್ಧಗಂಗೆಯ ಲಿಂಗೈಕ್ಯ ಡಾ.ಶ್ರೀ. ಶ್ರೀ ಶಿವಕುಮಾರಸ್ವಾಮೀಜಿ ಅವರ ಸೇವಾ ಕೈಂಕರ್ಯವನ್ನು ನೆನೆದ ಪುನೀತ್ರಾಜ್ಕುಮಾರ್, ಗುರುವಿನ ಆಶೀರ್ವಾದದೊಂದಿಗೆ ವಿದ್ಯೆ ಕಲಿಯುತ್ತಿರುವ ನೀವೇ ಧನ್ಯರು ಎಂದು ಮಠದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಶ್ರೀ ಮಠದ ಪರವಾಗಿ ಅಭಿನಂದಿಸಲಾಯಿತು. ಚಿತ್ರ ತಂಡದ ಡಾಲಿಧನಂಜಯ, ರವಿಶಂಕರ್ರ್, ಸಂತೋಷ್, ದಯಾಸಾಗರ್ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
