ತಿಪಟೂರು :
ಇಂದಿನ ಡಿಜಿಟಲ್ ಯುಗದಲ್ಲಿ ಎ.ಟಿ.ಎಂಗಳು ತುಂಬಾ ಪ್ರಯೋಜನಕಾರಿಯಾಗಿದ್ದು ಇದು ಬ್ಯಾಂಕಿನ ವಹಿವಾಟು ಹೆಚ್ಚಾಗಲು ಸಹಕಾರಿಯಾಗಿದೆ ಎಂದು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಡಿ.ಸಿ.ಸಿ ಬ್ಯಾಂಕ್‍ನಲ್ಲಿ ಎ.ಟಿ.ಎಂ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಡಿ.ಸಿ.ಸಿ ಬ್ಯಾಂಕ್ ಎಂದರೆ ಎ.ಟಿ.ಎಂ. ಕಾರ್ಡ್‍ಇಲ್ಲ ನಮ್ಮ ಖಾತೆಯಲ್ಲಿ ಹಣತೆಗೆದುಕೊಳ್ಳಲು ಬ್ಯಾಂಕಿಗೆ ಹೋಗಿ ಸರದಿಯಲ್ಲಿ ನಿಲ್ಲಬೇಕು ಎಂಬ ವಾತಾವರಣ ಸೃಷ್ಠಿಯಾಗಿತ್ತು. ನಮ್ಮ ದೇಶವು ರೈತರ ದೇಶ ಇದರಿಂದ ಪ್ರತಿಯೊಬ್ಬರು ಡಿ.ಸಿ.ಸಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ಸೂಕ್ತ ಸಮಯದಲ್ಲಿ ಸಾಲವನ್ನು ಪಡೆದು ಅದೇರೀತಿ ಸಾಲವನ್ನು ಹಿಂತಿರುಗಿಸಿದರೆ ಇನ್ನೊಬ್ಬರಿಗೆ ಅನುಕೂಲವಾಗುತ್ತದೆ ತಾವು ಬೆಳೆಯುವುದರೊಂದಿಗೆ ಬ್ಯಾಂಕನ್ನು ಬೆಳೆಸಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಹಾಗೂ ಕೆ.ಪಿ.ಸಿ.ಸಿ. ಸದಸ್ಯ ವಿ.ಯೋಗೀಶ್, ಬ್ಯಾಂಕಿನ ಆರ್ಥಿಕ ಸಲಹೆಗಾರರಾದ ಜಂಗಮಪ್ಪ, ವ್ಯವಸ್ಥಾಪಕ ಮುದ್ದಪ್ಪ, ಮೇಲ್ವಿಚಾರಕ ಟಿ.ಪಿ.ಉಮಾಶಂಕರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ