ಕೌಶಲ್ಯ ತರಬೇತಿಯಿಂದ ಸ್ವಾವಲಂಬಿ ಜೀವನ ಸಾಧ್ಯ

 ಕೊರಟಗೆರೆ :

      ಪ್ರತಿಯೊಬ್ಬ ಮಹಿಳೆಯು ಶೈಕ್ಷಣಿಕವಾಗಿ ಪ್ರಗತಿ ಕಾಣುವುದರೊಂದಿಗೆ ಸ್ವಯಂ ಉದ್ಯೋಗದಲ್ಲಿ ಆರ್ಥಿಕವಾಗಿ ಕಂಡುಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ಸಾಗಿಸಲು ಮುಂದಾಗಬೇಕೆಂದು ಬೆಂಗಳೂರು ಮೈಂಡ್‍ಟ್ರೀ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಪಣೀಶ್‍ರಾವ್ ತಿಳಿಸಿದರು.

      ನಂತರ ಮಾತನಾಡಿದ ಅವರು, ಕೊರಟಗೆರೆ ಪಟ್ಟಣದಲ್ಲಿ ಬೀಮ್ ರೂರಲ್ ಡೆವಲಪ್‍ಮೆಂಟ್ ಆರ್ಗನೈಸೇಷನ್ ಉಚಿತ ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯವಿದ್ದಲ್ಲಿ ಮಾತ್ರ ಯಶಸ್ಸುನ್ನೂ ಸಾಧಿಸಬಹುದು ಎಂದು ಗ್ರಾಮೀಣ ಮಹಿಳೆಯರಿಗೆ ಮತ್ತು ಯುವಕರಿಗೆ ಕಿವಿಮಾತನ್ನು ತಿಳಿಸಿದರು.

      ಈ ಯುಗದಲ್ಲಿ ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೌಶಲ್ಯಗಳನ್ನು ಕಲಿಯುವುದರಿಂದ ಜೀವನದಲ್ಲಿ ಸ್ವಾವಲಂಬಿಗಳಾಗಬಹುದು. ಕೊರಟಗೆರೆ ತಾಲ್ಲೂಕಿನಲ್ಲಿ ಗ್ರಾಮೀಣ ಮಹಿಳೆಯರು ಬೀಮ್ ಸಂಸ್ಥೆ ನೀಡುತ್ತಿರುವ ಹೊಲಿಗೆ ಮತ್ತು ಸೀರೆಗಳಿಗೆ ಕುಚ್ಚು ಹಾಕುವ ತರಬೇತಿ ಪಡೆಯುವ ಮೂಲಕ ತಮ್ಮ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಆರ್ಥಿಕವಾಗಿ ಸದೃಢರಾಗಬಹುದು. ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಿರುದ್ಯೋಗಿ ಯುವಕ ಯುವತಿಯರು ಕಂಪ್ಯೂಟರ್ ತರಬೇತಿ ಪಡೆದರೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು. ಸ್ವಯಂ ಉದ್ಯೋಗ ಸೃಷ್ಟಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿಲಾಯಿತು.

      ಮೈಂಡ್‍ಟ್ರೀ ಸಂಸ್ಥೆಯ ಮ್ಯಾನೇಜರ್ ಅಬ್ರಹಾಂ ಮೋಸಸ್ ಮಾತನಾಡಿ, ಬೀಮ್ ಸಂಸ್ಥೆ ಕಳೆದ 3 ವರ್ಷಗಳಿಂದ ಕೊರಟಗೆರೆ ಪಟ್ಟಣದಲ್ಲಿ ಮಹಿಳೆಯರಿಗಾಗಿ ಹೊಲಿಗೆ ಮತ್ತು ಎಂಬ್ರಾಯಿಡರಿ ತರಬೇತಿ ನೀಡುತ್ತಿದೆವೆ ತಾಲ್ಲೂಕಿನ ಅನೇಕ ಮಹಿಳೆಯರು ಉಚಿತ ಕೌಶಲ್ಯ ತರಬೇತಿ ಪಡೆಯುವ ಮೂಲಕ ಆರ್ಥಿಕ ಸ್ವ್ವಾವಲಂಬನೆ, ಜೀವನವನ್ನು ಸಾಗಿಸಬಹುದು ಮತ್ತು ಸಾಮಾಜಿಕ ಭದ್ರತೆಯನ್ನು ಸಹ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಈಗಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಶೈಕ್ಷಣಿಕ ಪದವಿದೊಂದಿಗೆ ಕಂಪ್ಯೂಟರ್ ಶಿಕ್ಷಣವನ್ನು ಪಡೆಯವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ಸಾಧಿಸಬಹುದು ಎಂದರು.
ಬೀಮ್ ರೂರಲ್ ಡೆವಲಪ್‍ಮೆಂಟ್ ಆರ್ಗನೈಸೇಷನ್ ಸಂಸ್ಥೆಯ ವ್ಯವಸ್ಥಾಪಕಿಯದಾ ಶೋಭಾರವಿಕುಮಾರ್ ಮಾತನಾಡಿ, ಕಂಪ್ಯೂಟರ್, ಹೊಲಿಗೆ ಮತ್ತು ಸೀರೆಗೆ ಕುಚ್ಚು ಕಟ್ಟುವ ಉಚಿತ ತರಬೇತಿ ಪಡೆಯುವ ವಿದ್ಯಾರ್ಥಿಗಳು ಮತ್ತು ಮಹಿಳೆಯರು ತಾವು ತರಬೇತಿ ಪಡೆಯುವುದರೊಂದಿಗೆ ತಮ್ಮ ಸುತ್ತಮುತ್ತಲ ಮಹಿಳೆಯರಿಗೆ ಮತ್ತು ನಿರುದ್ಯೋಗಿಗಳಿಗೆ ತರಬೇತಿ ಪಡೆಯುವಂತೆ ಅವರಲ್ಲಿ ಅರಿವು ಮೂಡಿಸಿದರೆ ತಾವು ತರಬೇತಿ ಪಡೆದ ಸಂಸ್ಥೆಗೆ ಗೌರವ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದರು.

      ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗೆ ಕಂಪ್ಯೂಟರ್ ಶಿಕ್ಷಣ ಮತ್ತು ಮಹಿಳೆಯರಿಗೆ ಹೊಲಿಗೆ ಮತ್ತು ಎಂಬ್ರ್ರಾಯಿಡರಿ ತರಬೇತಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿ ಈ ಕೌಶಲ್ಯ ತರಬೇತಿಯೊಂದಿಗೆ ಹೆಚ್ಚಿನ ಕೌಶಲ್ಯಗಳನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬೀಮ್ ಸಂಸ್ಥೆಯ ವ್ಯವಸ್ಥಾಪಕರಾದ ಬಿ.ಜಿ.ರವಿಕುಮಾರ್, ಪತ್ರಕರ್ತರಾದ ಎನ್.ಪದ್ಮನಾಭ್, ತರಬೇತಿ ಶಿಕ್ಷಕರಾದ ಶ್ರೀದೇವಿ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link