ಕೊರಟಗೆರೆ :
70ವರ್ಷದಿಂದ ಕತ್ತಲೆಯಜೀವನ ನಡೆಸಿ ಸಾಕಾಗಿದೆ. ಈಗ ಮತದಾನ ಮಾಡಿದರೇ ನಮ್ಮಜೀವನ ಬೆಳಕಾಗಲು ಸಾಧ್ಯವೇ. ಉಪ ಚುನಾವಣೆಯ ಮತದಾನದಿಂದದೂರು ಉಳಿದು ಮತದಾನಕ್ಕೆ ಬಹಿಷ್ಕಾರ ಹಾಕಿದ್ದೇವೆಎಂದು ತಹಶೀಲ್ದಾರ್ ಗೋವಿಂದರಾಜುಗೆ ಮನವಿ ಸಲ್ಲಿಸಿದ ಘಟನೆಗುರುವಾರ ನಡೆದಿದೆ.
ಕೊರಟಗೆರೆ ಪಟ್ಟಣದ 4ನೇವಾರ್ಡಿಗೆ ಸೇರಿರುವ ಕಾವಲುಬೀಳುಗೆ ಕಳೆದ 70ವರ್ಷದಿಂದ ಮೂಲಸೌಲಭ್ಯ ಮರೀಚಿಕೆಯಾಗಿದೆ. ಹಗಲಿನಲ್ಲಿ ಮೂಲ ಸೌಲಭ್ಯ ಮರೀಚಿಕೆ. ರಾತ್ರಿಯಾದರೇ ಕರಡಿ-ಚಿರತೆಗಳ ಹಾವಳಿಗೆ ನಮ್ಮ ಮಕ್ಕಳೇ ಮನೆಬಿಟ್ಟು ಪಟ್ಟಣಕ್ಕೆ ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಕಾವಲುಬೀಳು ವಾಸಿಯಾದ ಶಶಿಕುಮಾರ್ ಮಾತನಾಡಿ 4ನೇ ವಾರ್ಡಿನ ಕಾವಲುಬೀಳು ಗ್ರಾಮದಲ್ಲಿ 20ಕ್ಕೂ ಅಧಿಕ ಮನೆಗಳಿವೆ. 120ಕ್ಕೂ ಅಧಿಕ ಮತದಾರರುಇದ್ದಾರೆ. ರಾಜಕೀಯತಂತ್ರಗಾರಿಕೆಅವರಿಗೆಉಪಯೋಗಆಗುವಂತೆ ನಮ್ಮನ್ನು ಬೇರ್ಪಡಿಸಿದ್ದಾರೆ. ಕುಡಿಯುವ ನೀರು, ಬೆಳಕು, ರಸ್ತೆ ಸೇರಿದಂತೆದೂರವಾಣಿ ಸಂಪರ್ಕವೆ ಮರೀಚಿಕೆಆಗಿದೆ. ನಮಗೆ ಚುನಾವಣೆಗಿಂತ ಸೌಕರ್ಯವೇಅವಶ್ಯಕವಾಗಿ ಬೇಕಾಗಿದೆಎಂದು ಹೇಳಿದರು.
4ನೇ ವಾರ್ಡಿನ ಕಾವಲುಬೀಳು ಪ್ರದೇಶಕ್ಕೆ ತಹಶೀಲ್ದಾರ್ ಗೋವಿಂದರಾಜು, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್ ಬೇಟಿ ನೀಡಿ ಮೂಲಸೌಕರ್ಯಒದಗಿಸುವ ಭರವಸೆ ನೀಡಿ ಮತದಾನ ಮಾಡುವಂತೆ ಮನವೊಲಿಸಿದರೂ ಸಹ ಮತದಾರರುಒಪ್ಪದೇ ಮತದಾನ ಬಹಿಷ್ಕಾರ ಮುಂದುವರೆಸಿ ಚುನಾವಣೆಯಿಂದದೂರ ಉಳಿಯುವ ಪ್ರಯತ್ನ ಮಾಡಿದ್ದಾರೆ.
ಮತದಾನ ಬಹಿಷ್ಕಾರ ಸಂದರ್ಭದಲ್ಲಿರವಿಕುಮಾರ್, ಲೊಕೇಶ್, ಸೋಮಸುಂದರ್, ಇಸ್ಮಾಯಿಲ್, ನವೀನಕುಮಾರ್, ರಘು, ಸಿಂಧು, ತಿಮ್ಮಣ್ಣ, ಮಂಜುನಾಥ, ಕಾಂತರಾಜು, ಜಯಮ್ಮ, ರೇಹಮಾನ್, ನಯನ, ರವಿಕುಮಾರ್, ರಂಗನಾಥ, ವೆಂಕಟೇಶ್, ಪ್ರಕಾಶ್, ಕೆಂಪಣ್ಣ, ಶಿವಮ್ಮ, ಶ್ರೀನಿವಾಸ್, ಲಕ್ಷ್ಮಿದೇವಮ್ಮ, ನಾಗರತ್ನಮ್ಮ, ಹರೀಶ್ ಸೇರಿದಂತೆಇತರರುಇದ್ದರು.
ಕಾವಲುಬೀಳು ಪ್ರದೇಶಕ್ಕೆ ಕೊಳವೆಬಾವಿ, ಪೈಪ್‍ಲೈನ್ ಮತ್ತು ಬೀದಿದ್ವೀಪ ವ್ಯವಸ್ಥೆಕಲ್ಪಿಸಲಾಗಿದೆ. ರಸ್ತೆಅಭಿವೃದ್ದಿಗೆ 1ಕೋಟಿ ಅನುಧಾನ ಮತ್ತು ಮೂಲಸೌಲಭ್ಯಕ್ಕೆ 20ಲಕ್ಷ ಈಗಾಗಲೇ ಬಿಡುಗಡೆಆಗಿದೆ. ಜಿಲ್ಲಾಧಿಕಾರಿ ಬಳಿ ಮಾತನಾಡಿತ್ವರಿತವಾಗಿಅನುಧಾನ ಬಿಡುಗಡೆ ಮಾಡಿಸಿ ಅಭಿವೃದ್ದಿ ಪಡಿಸುತ್ತೇವೆ. ಮತದಾನ ನಮ್ಮ ಹಕ್ಕು ಮತ್ತುಕರ್ತವ್ಯ. ಕಾವಲುಬೀಳಿನ ಪ್ರತಿಯೊಬ್ಬ ಮರದಾರರು ಮತದಾನ ಮಾಡಬೇಕು. ಮತದಾನದಿಂದಯಾರುದೂರ ಉಳಿಯಬಾರದು.
– ಗೋವಿಂದರಾಜು. ತಹಶೀಲ್ದಾರ್. ಕೊರಟಗೆರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ