ತಿಪಟೂರು : ಜೆ.ಡಿ.ಎಸ್ ಕೋಟೆಯಲ್ಲಿ ಅರಳಿದ ಕಮಲ

 ತಿಪಟೂರು :

      ನಗರಸಭೆಯ 31ನೇ ವಾರ್ಡ್‍ನ ಉಪಚುನಾವಣೆಯಲ್ಲಿ ಬಿ.ಜೆ.ಪಿ.ಅಭ್ಯರ್ಥಿಯಾಗಿ ಅಶ್ವಿನಿ ದೇವರಾಜು, ಕಾಂಗ್ರೆಸ್‍ನ ನಂದಿನಿ ಎಸ್ ಕಿಟ್ಟಿ ವಿರುದ್ದ 45 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

2019ರಲ್ಲಿ ನಡೆದ ಚುನಾವಣೆಯಲ್ಲಿ 31ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಜೆ.ಡಿ.ಎಸ್‍ನ ಸರೋಜಮ್ಮನವರ ಅಕಾಲಿಕ ನಿಧನದಿಂದ ಮರುಚುನಾವಣೆಯಲ್ಲಿ ಶೇಕಡಾ 86.27% ಮತದಾನ ನಡೆದಿದ್ದು ಇಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬಿ.ಜೆ.ಪಿ 389, ಕಾಂಗ್ರೆಸ್ 344, ಜೆ.ಡಿ.ಎಸ್ 54, ಇತರೆ ಅಭ್ಯರ್ಥಿಗಳು 10 ಹಾಗೂ ನೋಟಕ್ಕೆ 7 ಮತಗಳನ್ನು ಪಡೆದು ಬಿ.ಜೆ.ಪಿ 45 ಮತಗಳ ಅಂತರದಿಂದ ಜಯ ಸಾಧಿಸಿದೆ.

ಪಕ್ಷಾಂತರದಿಂದ ನೆಲೆ ಕಳೆದುಕೊಂಡು ಜೆ.ಡಿ.ಎಸ್ ಕಳೆದ 3 ಚುನಾವಣೆಯಗಳಲ್ಲೂ ಜೆ.ಡಿ.ಎಸ್ 31ನೇ ವಾರ್ಡ್‍ನಲ್ಲಿ ಜಯಸಾಧಿಸಿದ್ದು ಜೆ.ಡಿ.ಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದು ಆದರೆ ಇಂದು ಜೆ.ಡಿ.ಎಸ್ ನೆಲೆ ಕಳೆದುಕೊಂಡಿದೆ. ಇನ್ನು ಚುನಾವಣೆಯಲ್ಲಿ ಜೆ.ಡಿ.ಎಸ್ ಕೇವಲ 54 ಮತಗಳನ್ನು ಪಡೆಯಲು ಮುಖ್ಯ ಕಾರಣವೆಂದರೆ ಕಳೆದ ಚುನಾವಣೆಯಲ್ಲಿ ಜೆ.ಡಿ.ಎಸ್ ನಿಂದ ಸ್ಪರ್ಧಿಸಿ ವಿಜೇತರಾಗಿದ್ದ ಜೆ.ಡಿ.ಎಸ್ ಅಭ್ಯರ್ಥಿಗಳು ಬಿ.ಜೆ.ಪಿಗೆ ಸೇರ್ಪಡೆಯಾಗಿದ್ದಾರೆ ಮುಖ್ಯವಾಗಿ ನಗರಸಭೆ ಉಪಾಧ್ಯಕ್ಷ ಸೊಪ್ಪುಗಣೇಶ್ ಹಾಗೂ ಜೆ.ಡಿ.ಎಸ್‍ನಲ್ಲಿದ್ದ ಲೋಕೇಶ್ವರ್ ಬಿ.ಜೆ.ಪಿ ಗೆ ಸೇರ್ಪಡೆಯಾಗಿದ್ದು ಜೆ.ಡಿ.ಎಸ್ ಪತನಗೊಳ್ಳಲು ಕಾರಣವಾಗಿದ್ದು ಕಾಂಗ್ರೆಸ್ ಮತ್ತು ಬಿ.ಜೆ.ಪಿಯ ನಡುವೆ ತೀರ್ವ ಹಣಾಹಣಿ ನಡೆದು ಕೊನೆಗೆ ಬಿ.ಜೆ.ಪಿ ಸಾಧಿಸಲು ಜೆ.ಡಿ.ಎಸ್ ಆಂತರಿಕವಾಗಿ ನೆರವಾದಂತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap