ಕುಣಿಗಲ್ :
ತಾಲ್ಲೂಕಿನಲ್ಲಿ ಎರಡನೇ ಹಂತದ ಕರೋನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳು ವಿಫಲರಾಗಿದ್ದಾರೆಂದು ತಾ.ಪಂ. ಸದಸ್ಯ ಕೊಡಗಿಹಳ್ಳಿ ದಿನೇಶ್ ಮತ್ತು ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ನಾಗಮ್ಮ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸುತ್ತ ಎರಡನೇ ಸುತ್ತಿನ ಕರೋನ ಹೆಚ್ಚುತ್ತಿದೆ ಸೂಕ್ತ ಕ್ರಮ ಜರಿಗಿಸಲು ಸರ್ಕಾರ ಸೂಚಿಸಿದೆ ಆದರೆ ಇಲ್ಲಿನ ವೈದ್ಯಾಧಿಕಾರಿಯಾದ ಜಗದೀಶ್ ಏನೂ ಕ್ರಮ ಕೈಗೊಳ್ಳದೆ ಬರೀ ಸಬೂಬು ಹೇಳುತ್ತಿದ್ದಾರೆ. ಏಕೆ ಸರ್ಕಾರದ ಆದೇಶ ಪಾಲನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ನನ್ನೂರಿನಲ್ಲಿಯೇ ಕೊರೊನಾ ಬಂದ ವ್ಯಕ್ತಿಗಳಿಗೆ ಸೂಕ್ತಕ್ರಮ ಕೈಗೊಂಡಿಲ್ಲ ಅವರನ್ನ ಕ್ವಾರೆಂಟೈನ್ ಮತ್ತು ಚಿಕಿತ್ಸೆ ಬಗ್ಗೆ ನೋಡಿಲ್ಲ ಹೀಗಾದರೆ ಜನ ಸಾಮಾನ್ಯರ ಗೋಳು ಕೇಳೋರು ಯಾರೆಂದು ಜನ ಸಾಮಾನ್ಯರು ವೈದ್ಯಧಿಕಾರಿಯ ವಿರುದ್ಧ ಕಿಡಿಕಾರಿದರು.
ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕುಡಿಯುವ ನೀರು ಸ್ವಚ್ಛತೆ ಜನೌಷಧಿ ಮಳಿಗೆ ಜನಸಾಮಾನ್ಯರಿಗೆ ಇದ್ದು ಇಲ್ಲದಂತಾಗಿದೆ ಈ ಬಗ್ಗೆ ವೈದ್ಯಾಧಿಕಾರಿ ಡಾ. ಗಣೇಶ ಬಾಬು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸದೇ ಕಾಲ ಕಳೆಯುತ್ತಿದ್ದೀರಾ ಎಂದು ಸದಸ್ಯರಾದ ಕೆ.ಎಸ್. ಬಲರಾಮ್ ತೀವ್ರವಾಗಿ ಅವರನ್ನೂ ತರಾಟೆ ತೆಗೆದುಕೊಂಡರು ಸರ್ಕಾರದ ಸಂಬಳಕ್ಕೆ ಅನುಗುಣವಾಗಿ ಬಡವರಿಗೆ ಸಿಗಬೇಕಾದ ಔಷದಿಗಳು ಜನರಿಗೆ ದಕ್ಕುತ್ತಿಲ್ಲ ಇಲ್ಲಿನ ಕೆಲವು ವೈದ್ಯರು ಕಮಿಷನ್ ಆಸೆಗಾಗಿ ಬೇರೆ ಮೆಡಿಕಲ್ ಶಾಪ್ ಗಳಿಗೆ ಚೀಟಿಗಳನ್ನು ಬರೆಯಲಾಗುತ್ತದೆ ಎಂದು ದೂರಿದರು ಸರ್ಕಾರಿ ಆಸ್ಪತ್ರೆಗೆ ಕುಡಿಯುವ ನೀರಿಗೆ ಸರಿಯಾದ ವ್ಯವಸ್ಥೆಯಿಲ್ಲ ಮತ್ತು ಶೌಚಾಲಯ ಸಮಸ್ಯೆ ಸೇರಿದಂತೆ ಕ್ರಮ ತೆಗೆದು ಕೊಳ್ಳಬೇಕೆಂದು ಆಗ್ರಹಿಸಿದರು. ಅಮೃತೂರ್ ಆಸ್ಪತ್ರೆಯಲ್ಲೂ ಸಹ ಕುಡಿಯುವ ನೀರಿಗೆ ಹಾಹಾಕಾರ ಇದೆ ಎಂದು ದೂರಿದರು.
ತಾ.ಪ ಅಧ್ಯಕ್ಷರು ನಾಗಮ್ಮ ಮಾತನಾಡಿ, ಕಳೆದ ಆರು ವರ್ಷಗಳಿಂದ ಪರಿಶಿಷ್ಟ ಜಾತಿ ವರ್ಗದವರಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬಂದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು ಇದಕ್ಕೆ ಬಿ.ಸಿ.ಎಂ ಅಧಿಕಾರಿ ಪಾರ್ವತಮ್ಮ ಸಮಾಜ ಕಲ್ಯಾಣಾಧಿಕಾರಿ ಕಾಳಮ್ಮ ಸ್ಪಷ್ಟೀಕರಣ ನೀಡಿದರು ತಾಲ್ಲೂಕಿನಲ್ಲಿ ಹಲವಾರು ಶಾಲೆಗಳಲ್ಲಿ ಕುಡಿಯುವ ನೀರು ಶೌಚಾಲಯ ಇಲ್ಲದೆ ಇರುವ ಬಗ್ಗೆ ಶಿಕ್ಷಣಾಧಿಕಾರಿಗಳು ತಿಮ್ಮರಾಜು ಸಭೆಗೆ ವಿವರಿಸಿದರು ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು ಎಂದರು ಸಾಮಾಜಿಕ ಅರಣ್ಯ ಆಹಾರ ಹೇಮಾವತಿ ಸೇರಿದಂತೆ ಹಲವಾರು ಇಲಾಖೆಗಳ ಮೇಲೆ ಚರ್ಚೆ ನಡೆಯಿತು ಸಭೆಯಲ್ಲಿ ಮಾಜಿ ಅಧ್ಯಕ್ಷ ಹರೀಶ್ ನಾಯ್ಕ ಉಪಾಧ್ಯಕ್ಷರಾದ ಜಿಯಾವುಲ್ಲಾ ಹಾಗೂ ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
