ಕೊರಟಗೆರೆ :
ಸಾಮಾಜಿ ಅಂತರ ಕಾಯ್ದುಕೊಳ್ಳುವುದರೊಂದಿಗೆ ಮಾಸ್ಕ್ ಧರಿಸಿ ಎಲ್ಲರೂ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಕೊರಟಗೆರೆ ಪಿಎಸ್ಐ ಹೆಚ್.ಮುತ್ತರಾಜು ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಮುಖ್ಯ ರಸ್ತೆಯಲ್ಲಿ ಕರೋನಾ ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ತಪ್ಪದೇ ಪಾಲಿಸಬೇಕಿರುವ ನಿಯಗಳನ್ನು ಉದ್ದೇಶಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತಾಡಿದರು.
ಸಾರ್ವಜನಿಕ ಸ್ಥಳ ಶಾಲಾ ಕಾಲೇಜು ಸಂಚಾರ ಮಾಡುವಂತಹ ಸಂದರ್ಭದಲ್ಲಿ ಸಮಾಜಿಕ ಅಂತರವನ್ನು ತಪ್ಪದೇ ಪಾಲಿಸಬೇಕು ಇಲ್ಲವಾದಲ್ಲಿ ರೋಗಕ್ಕೆ ತುತ್ತಾಗಬೇಕಾಗುತ್ತದೆ ಆದ್ದರಿಂದ ಎಚ್ಚರ ವಹಿಸಬೇಕು ಅದೇ ರೀತಿ ವಿದ್ಯಾರ್ಥಿಗಳು ಹೆಚ್ಚು ಎಚ್ಚರಿಕೆಯಿಂದ ಶಾಲಾ ಕಾಲೇಜಿಗೆ ಬರಬೇಕು ಅದೇ ರೀತಿ ತಪ್ಪದೇ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ವೈಯಕ್ತಿವಾಗಿ ನಾನು ಲಸಿಕೆಯನ್ನು ಪಡೆದಿದ್ದೇನೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳುವ ಮೂಲಕ ಅಥ್ಮಸ್ಥೈಯವನ್ನು ತುಂಬಿದರು.
ಆಟೋದ ಮೂಲಕ ಧ್ವನಿವರ್ಧಕದ ಮೂಲಕ ಮಾಹಿತಿಯನ್ನು ತಿಳಿಸುತ್ತಾ ಸಾರ್ವಜನಿಕ ಜಾಥಾವನ್ನು ನಡೆಸುವ ಮೂಲಕ ಸಾರ್ವಜಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಸದಾನಂದ, ರಂಗನಾಥ, ಸೋಮನಾಥ, ಪ್ರಶಾಂತ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ