ಚಿಕ್ಕನಾಯಕನಹಳ್ಳಿ :
ಕಳೆದ ವಾರ ಕುರಿ ಸಂತೆ ಇರಲಿ ತರಕಾರಿ ಸಂತೆಗೆ ಮುಕ್ತವಾದ ವಾತಾವರಣವಿಲ್ಲದೆ ವ್ಯಾಪಾರಸ್ಥರು ಹೈರಾಣಾಗಿದ್ದರೂ ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲ್ಲಿ ಎಂದು ತಾಲ್ಲೂಕು ಆಡಳಿತ ಕಂಡೂ ಕಾಣದಂತೆ ಇದಿದ್ದರಿಂದ ಜನರು ತುಂಬಾ ಲಗುಬಗೆಯಿಂದ ಹಬ್ಬದ ಸಂತೆ ಮಾಡತೊಡಗಿದ್ದರು ವಿಶೇಷವಾಗಿ ಕುರಿ ಸಂತೆಯಂತೂ ಸೋಮವಾರ ಬೆಳಿಗ್ಗೆ 6 ಗಂಟೆಯಿಂದಲೆ ಆರಂಭವಾಗಿತ್ತು.
ಹಿಂದೂ ಪಂಚಾಗದ ಪ್ರಥಮ ಹಬ್ಬವಾದ ಯುಗಾದಿಗೆ ಮೆರಗುತಂದು ಕೊಡುವುದೆ ಮರುದಿನದ ವರ್ಷದ ತೊಡಕು ಇದರ ಸಿದ್ದತೆಗೆ ಕುರಿ, ಮೇಕೆ, ಟಗರು ಮಾರಲು ಹಾಗೂ ಕೊಳ್ಳಲು ಜನರು ಹಳ್ಳಿಗಳಿಂದ ಪಟ್ಟಣದ ಎ.ಪಿ.ಎಂ.ಸಿ ಕುರಿಸಂತೆಗೆ ಆಗಮಿಸಿದ್ದರು ಈ ವೇಳೆ ಕುರಿ ಮಾರಾಟದ ಬೆಲೆ ಹೆಚ್ಚಾಗಿಯೂ ಇತ್ತು.
ಯುಗಾದಿ ಹಬ್ಬದ ಮಾರಾಟಕ್ಕಾಗಿಯೆ ಕೆಲವು ರೈತರು ಕುರಿ ಮೇಕೆಗಳನ್ನು ಸಾಕುತ್ತಾರೆ ಉಪ ಕಸುಬುಗಳನ್ನು ಮಾಡುವ ರೈತರು ಕುರಿ ಮೇಕೆಗಳನ್ನು ಸಾಕಿ ಮಾರಾಟ ಮಾಡಿ ಈ ಮೂಲಕವೂ ತಮ್ಮ ಜೀವನ ನಡೆಸುತ್ತಾರೆ. ತಾಲ್ಲೂಕಿನ ಗೋಡೆಕೆರೆ, ಸೊಂಡೇನಹಳ್ಳಿ, ತಿಮ್ಮನಹಳ್ಳಿ, ಕಂದಿಕೆರೆ, ಕಾತ್ರಿಕೆಹಾಳ್ ಹಾಗೂ ಕುಪ್ಪೂರು ಭಾಗಗಳಿಂದ ಹೆಚ್ಚಿನ ರೈತರು ತಾವು ಸಾಕಿರುವ ಕುರಿ, ಮೇಕೆಗಳನ್ನು ಮಾರಲು ಪಟ್ಟಣದ ಎ.ಪಿ.ಎಂ.ಸಿ ಕುರಿ ಸಂತೆಗೆ ಮುಂಜಾನೆಯೆ ಆಗಮಿಸಿದ್ದರು ಪ್ರತಿ ವಾರ ಇದ್ದ ಕುರಿ ಬೆಲೆಗಿಂತ ಈ ವಾರ ಬೆಲೆಯನ್ನು ಮಾರಾಟಗಾರರು ಹೆಚ್ಚಾಗಿಯೆ ಹೇಳುತ್ತಿದ್ದರು, 18 ರಿಂದ 20 ಕೆ.ಜಿ.ತೂಗುವ ಕುರಿ ಮೇಕೆಗೆ 10 ರಿಂದ 15ಸಾವಿರ ರೂ ಬೆಲೆಗೆ ಮಾರಾಟವಾಗುತ್ತಿದೆ ಎಂದು ಸೊಂಡೇನಹಳ್ಳಿ ಸಣ್ಣೇಗೌಡ ತಿಳಿಸಿದರು.
ಅಂಗಡಿಗಳಲ್ಲಿ ಮಟನ್ ಬೆಲೆಯೂ ಹೆಚ್ಚಾಗಲಿದೆ ಕೆ.ಜಿ.ಗೆ 600 ರೂ ನಿಂದ 700 ರೂ ವರೆಗೆ ಮಟನ್ ಬೆಲೆಯಾಗಿದೆ ಆದರೂ ಜನರು ಕುರಿ, ಮೇಕೆ, ಟಗರು,ಗಳನ್ನು ಕೊಳ್ಳಲು ಮುಂದಾಗುತ್ತಾರೆ, ಕೆಲವರು ಮಟನ್ ಸಹವಾಸವೇ ಬೇಡ ಕಡಿಮೆ ಬೆಲೆಗೆ ಸಿಗುವ ಕೋಳಿಯನ್ನೇ ಕೊಳ್ಳೋಣ ಎಂದು ಮಾತನಾಡಿಕೊಳ್ಳುತ್ತಿದ್ದರು.
ಯುಗಾದಿಗಾಗಿಯೆ ಪಟ್ಟಣ ಮಾತ್ರವಲ್ಲದೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಮಟನ್ ಚೀಟಿ ಹಾಕಿ ತಿಂಗಳಿಗೊಮ್ಮೆ ಇಂತಿಷ್ಟು ಹಣವನ್ನು ಕೂಡಿಟ್ಟು ಹಬ್ಬದ ದಿನದಂದು ಕುರಿ, ಮೇಕೆಯನ್ನು ತಂದು ಚೀಟಿ ಹಾಕಿದ ಜನರೆಲ್ಲೂ ಭಾಗ ಮಾಡಿಕೊಂಡು ಮಟನ್ ಪಡೆಯುವುದು ಇದೆ. ಮಟನ್ ಅಂಗಡಿಗಳಲ್ಲಿ ಮಟನ್ ಕೊಂಡರೆ ದುಪ್ಪಟ್ಟು ಬೆಲೆಯಾಗುವ ನಿರೀಕ್ಷೆ ಇರುವುದರಿಂದ ಕೆಲವು ಜನರು ಒಟ್ಟಾಗಿಯೆ ವರ್ಷದ ಹಿಂದೆಯೆ ಹಣ ಕೂಡಿಟ್ಟು ಕುರಿಯನ್ನು ತಾವೇ ಸಾಕುವುದೂ ಉಂಟು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ