ತುಮಕೂರು:
ಬೆವಿಕಂ ಶಿರಾ ನಗರ ಉಪ ವಿಭಾಗ-1 ಉಪಸ್ಥಾವರದ ವ್ಯಾಪ್ತಿಯಲ್ಲಿ ಕೆ.ವಿ ಹೊಸ ಮಾರ್ಗಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಏಪ್ರಿಲ್ 17 ಮತ್ತು 18ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಿವಿಲ್ ಬಸ್ ಸ್ಟ್ಯಾಂಡ್, ಮೆಕ್ಕಾ ರೈಸ್ ಮಿಲ್ ರಸ್ತೆ, ದರ್ಗಾ ವೃತ್ತ, ವಾಟರ್ ಟ್ಯಾಂಕ್, ಆಸಿಂ ಲೇಔಟ್, ಶ್ರೀನಿವಾಸಪುರ ಹಾಗೂ ಬೀಡಿ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಹೆಚ್.ಇ.ಶಾಂತರಾಜು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ